Select Your Language

Notifications

webdunia
webdunia
webdunia
webdunia

ಕಿರಿಕ್ ಪಾರ್ಟಿಯ ರಿಮೇಕ್‌‌‌‌ನಲ್ಲಿ ಸಿಧಾರ್ಥ್ ಮಲ್ಹೋತ್ರಾ

ಕಿರಿಕ್ ಪಾರ್ಟಿಯ ರಿಮೇಕ್‌‌‌‌ನಲ್ಲಿ ಸಿಧಾರ್ಥ್ ಮಲ್ಹೋತ್ರಾ

ಅತಿಥಾ

ಬೆಂಗಳೂರು , ಶುಕ್ರವಾರ, 16 ಫೆಬ್ರವರಿ 2018 (15:58 IST)
2016 ರಲ್ಲಿ ತೆರೆಕಂಡ 'ಕಿರಿಕ್ ಪಾರ್ಟಿ' ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸೌಂಡ್ ಮಾಡಿತ್ತು. ಸತತವಾಗಿ ಹೌಸ್ ಫುಲ್ ಪ್ರದರ್ಶನ ಕಂಡು 50 ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಬಿಸಿನೆಸ್ ಮಾಡಿದ 'ಕಿರಿಕ್ ಪಾರ್ಟಿ' ಹಲವಾರು ಪ್ರಶಸ್ತಿಗಳನ್ನು ಗಳಿಸಿತ್ತು.
ತೆಲುಗಿನಲ್ಲಿ ರೀಮೇಕ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗ, 'ಕಿರಿಕ್ ಪಾರ್ಟಿ' ಚಿತ್ರದ ಹಿಂದಿ ರೀಮೇಕ್ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ. ಬಾಲಿವುಡ್ ಕ್ಯಾಂಪಸ್-ಕಾಮಿಡಿಯೊಂದಿಗೆ ಸ್ವಂತ ಮರುನಿರ್ಮಾಣದೊಂದಿಗೆ ಬರುತ್ತಿದೆ. ಸಿಧಾರ್ಥ್ ಮಲ್ಹೋತ್ರಾ ಈ ಚಿತ್ರದಲ್ಲಿ ನಾಯಕನ ಪಾತ್ರ ವಹಿಸಲಿದ್ದಾರೆ.
 
ಮೂಲಗಳ ಪ್ರಕಾರ 'ಕಿರಿಕ್ ಪಾರ್ಟಿ' ಚಿತ್ರದ ರೀಮೇಕ್ ವರ್ಷನ್ ನಲ್ಲಿ ಅಭಿನಯಿಸಲು ಸಿದ್ಧಾರ್ಥ್ ಅಂತೂ ರೆಡಿ ಆಗಿದ್ದಾರಂತೆ. ಅಗ್ರೀಮೆಂಟ್ ಪೇಪರ್ ಗೆ ಸಹಿ ಹಾಕಿದರಂತೆ, ಶೀಘ್ರದಲ್ಲೇ ಶೂಟಿಂಗ್ ಶುರು ಆಗಲಿದೆಯಂತೆ. ‘ಕಿರಿಕ್ ಪಾರ್ಟಿ’ ಹಿಂದಿ ಚಿತ್ರದ ಹಕ್ಕುಗಳನ್ನು ಪಡೆದಿರುವ ಅಜಯ್ ಕಪೂರ್ ಅವರು ಸಿದ್ದಾರ್ಥ್‌ಗೆ ಸ್ಕ್ರಿಪ್ಟ್ ನೀಡಿದ್ದು, ಸಿದ್ದಾರ್ಥ್ ಇಷ್ಟಪಟ್ಟಿದ್ದಾರೆ ಎನ್ನಲಾಗಿದೆ.
 
ಇದರ ಜೋತೆಗೆ ಸಿದ್ಧಾರ್ಥ್ ಅವರ ಐಯಾರಿ ಚಿತ್ರವು ಸಹ ವಿಶ್ವದಾದ್ಯಂತ ಫೆಬ್ರವರಿ 16 ರಂದು (ಇಂದು) ಬಿಡುಗಡೆಯಾಗಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಿಯಾಂಕಾ ಚೋಪ್ರಾಗೂ ನೀರವ್ ಮೋದಿಗೂ ಏನ್ ಸಂಬಂಧ?ಇಲ್ಲಿದೆ ನೋಡಿ ಸ್ಫೋಟಕ ಮಾಹಿತಿ