Select Your Language

Notifications

webdunia
webdunia
webdunia
webdunia

ಸೌಂದರ್ಯದಿಂದಲೇ ಪ್ರೇಕ್ಷಕರನ್ನು ಮರಳು ಮಾಡುತ್ತಿರುವ ತಮನ್ನಾ

Tamannaah
mumbai , ಬುಧವಾರ, 27 ಡಿಸೆಂಬರ್ 2023 (15:58 IST)
ಬಾಹುಬಲಿ’ ಚಿತ್ರದಲ್ಲಿ ತಮ್ಮ ಧುಮ್ಮಿಕ್ಕುವ ಸೌಂದರ್ಯವನ್ನ ತೆರೆದಿಟ್ಟಿದ್ದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇದೀಗ ಟಾಪ್ ನಟಿಯರ ಸಾಲಿನಲ್ಲಿದ್ದಾರೆ. ಪಾತ್ರದಲ್ಲಿ ಗ್ಲಾಮರ್ ಇರಲಿ ಬಿಡಲಿ ತಮನ್ನಾ ಇದ್ದಾರೆ ಅಂದರೆ ಪ್ರೇಕ್ಷಕರ ಮೈ ಬೆಚ್ಚಗಾಗೋದಂತೂ ಗ್ಯಾರಂಟಿ.
 
ಕನ್ನಡದ ’ಜಾಗ್ವಾರ್’ ಚಿತ್ರದಲ್ಲಿ ತಮನ್ನಾ ಒಂದು ಐಟಂ ಹಾಡಿಗೆ ಹೆಜ್ಜೆ ಹಾಕಿ ಸ್ಯಾಂಡಲ್‌ವುಡ್‌ನಲ್ಲೂ ಹವಾ ಎಬ್ಬಿಸಿದ್ದರು. ಇಷ್ಟು ದಿನ ತೆರೆಗಷ್ಟೇ ಸೀಮಿತವಾಗಿದ್ದ ಅವರ ಸೌಂದರ್ಯ ಇದೀಗ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಸ್ತರಿಸಿದೆ. 
 
ಚೆನ್ನೈನ ಫೇಮಸ್ ಹೋಟೆಲ್ ಒಂದು ಮಿಡ್ ನೈಟ್ ಶೋ ನಡೆಸಲು ಸಿದ್ಧತೆಗಳನ್ನ ನಡೆಸಿದೆ. 2024ರ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಡಿಸೆಂಬರ್ 31ರ ಮಧ್ಯರಾತ್ರಿ ಕುಣಿಯಲು ತಮನ್ನಾರನ್ನ ಆಹ್ವಾನಿಸಿದೆ. ಇದಕ್ಕೆ ತಮನ್ನಾ ರೂ. 1.20 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾರಂತೆ. 
 
ಈ ಮೊತ್ತವನ್ನು ಕೊಡುವುದಾಗಿಯೂ ಹೋಟೆಲ್ ಮ್ಯಾನೇಜ್‌ಮೆಂಟ್ ಒಪ್ಪಿದೆಯಂತೆ. ಈ ಹಿಂದೆ ಪ್ರಿಯಾಂಕಾ ಚೋಪ್ರಾ ಇದೇ ರೀತಿ ನ್ಯೂ ಇಯರ್ ಪಾರ್ಟಿಯಲ್ಲಿ ಕುಣಿಯಲು 6 ಕೋಟಿ ಪೀಕಿದ್ದರು. ಅದೂ 20 ನಿಮಿಷ ಕುಣಿತ ಅಷ್ಟೇ. ಇದೀಗ ಚೆನ್ನ ಮೂಲದ ಅದೇ ಹೋಟೆಲ್ ತಮನ್ನಾರನ್ನ ಕರೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೀಚಲ್ಲಿ ಬಿಕಿನಿ ತೊಟ್ಟು ಈಜುತ್ತಿರುವ ಫೋಟೋ ಅಪ್ಲೋಡ್ ಮಾಡಿದ ದಿಶಾ ಪಟಾನಿ