Select Your Language

Notifications

webdunia
webdunia
webdunia
webdunia

ಸೋನಾಕ್ಷಿ ಸಿನ್ಹಾಗೆ ನಟನೆ ಬಿಟ್ರೆ ಇನ್ನೊಂದು ಇಷ್ಟ ಗೊತ್ತಾ?

Sonakshi Sinha
mumbai , ಬುಧವಾರ, 27 ಡಿಸೆಂಬರ್ 2023 (14:36 IST)
ಮನಸ್ಸಿನಲ್ಲಿ ಬಚ್ಚಿಟ್ಟುಕೊಂಡಿರುವ ಅದೆಷ್ಟೋ ಭಾವನೆಗಳನ್ನು ಒಂದು ಚಿತ್ರ ಹೊರಹಾಕುತ್ತೆ. ಇದುವರೆಗೂ ತಾನು ರಚಿಸಿದ ಚಿತ್ರಗಳ ಪ್ರದರ್ಶನ ಏರ್ಪಡಿಸುತ್ತೇನೆಂದು ಹೇಳಿದ್ದಾರೆ. ಅದಕ್ಕಾಗಿ ಇತ್ತೀಚೆಗೆ ಒಂದು ಫೋಟೋಶೂಟನ್ನು ಮಾಡಿಸಿದ್ದಾರೆ ಸೋನಾಕ್ಷಿ. ತನ್ನಲ್ಲಿರುವ ಕಲಾವಿದೆಯನ್ನು ಜಗತ್ತಿಗೆ ಪರಿಚಯಿಸಬೇಕೆಂದು ತಪಿಸುತ್ತಿದ್ದಾರೆ ಸೋನಾ. 
 
ಸಿನಿಮಾ ಶೂಟಿಂಗ್, ಪ್ರಚಾರ ಕಾರ್ಯ, ವಾಣಿಜ್ಯ ಪ್ರಕಟಣೆಗಳು ಅದೂ ಇದೂ ಅಂತ ಒಂದೇ ಒಂದು ಕ್ಷಣ ಬಿಡುವಿಲ್ಲದಂತೆ ಕಳೀತಿರ್ತಾರೆ ಹೀರೋಯಿನ್‌ಗಳು. ಈ ಬಿಝಿ ಶೆಡ್ಯೂಲ್‍ನಲ್ಲಿ ಸ್ವಲ್ಪ ಸಮಯ ಸಿಕ್ಕಿದರೂ ಸಾಕು ವಿಹಾರ, ಶಾಪಿಂಗ್ ಅಂತೇಳಿ ಹೊರಟು ಬಿಡ್ತಾರೆ. ಆದರೆ ಬಾಲಿವುಡ್ ಸುಂದರಿ ಸೋನಾಕ್ಷಿ ಸಿನ್ಹಾ ಮಾತ್ರ ಹಾಗಲ್ಲ. 
 
ಸಮಯ ಸಿಕ್ಕಾಗ ಸುಮ್ಮನೆ ಕಾಲಹರಣ ಮಾಡದೆ ಕುಂಚ ಹಿಡೀತಾರಂತೆ. ಪೇಟಿಂಗ್‌ ಮಾಡ್ತಾ ಸಮಯ ಕಳೀತಾರೆ. ನಟನೆ ಬಿಟ್ಟರೆ ನನಗೆ ತುಂಬಾ ಇಷ್ಟವಾಗಿದ್ದು ಚಿತ್ರಕಲೆ. ಮನಸ್ಸಿನಲ್ಲಿ ಒತ್ತಡ ಇದ್ದಾಗ ಪೇಟಿಂಗ್ ಮಾಡ್ತಾ ಸಮಾಧಾನ ಪಡೀತೀನಿ ಅಂತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆ ಬಗ್ಗೆ ಶೃುತಿ ಹಾಸನ್ ಹೇಳಿದ್ದೇನು ಗೊತ್ತಾ?