ಚಿತ್ರ ವಿಮರ್ಶೆ: ದಿಲ್ ಬೇಚಾರದಲ್ಲಿ ಸಾವಿನ ಬಗ್ಗೆ ಸಂದೇಶ ನೀಡಿದ್ದ ಸುಶಾಂತ್ ಸಿಂಗ್ ರಜಪೂತ್!

Webdunia
ಭಾನುವಾರ, 26 ಜುಲೈ 2020 (11:59 IST)
ಮುಂಬೈ: ಇಬ್ಬರು ಕ್ಯಾನ್ಸರ್ ಪೇಷೆಂಟ್ ಗಳು. ಇಬ್ಬರೂ ಜೀವನದ ಬಗ್ಗೆ ಏನೇನೋ ಕನಸುಗಳನ್ನಿಟ್ಟುಕೊಂಡಿರುತ್ತಾರೆ. ಜೀವನ ಇಂದೋ ನಾಳೆಯೋ ಮುಗಿಯುತ್ತದೆ ಎಂದು ಗೊತ್ತಿದ್ದರೂ ಇರುವಷ್ಟು ದಿನ ಖುಷಿಯಾಗಿರಲು ಬಯಸುತ್ತಾರೆ. ಆದರೆ ಎಲ್ಲಾ ಕತೆಯಂತೆ ಇವರದ್ದು ಹ್ಯಾಪೀ ಎಂಡಿಂಗ್ ಆಗುವುದಿಲ್ಲ.


ಇದು ಸುಶಾಂತ್ ಸಿಂಗ್ ರಜಪೂತ್ ಕೊನೆಯದಾಗಿ ಅಭಿನಯಿಸಿದ್ದ ‘ದಿಲ್ ಬೇಚಾರ’ ಸಿನಿಮಾದ ಒನ್ ಲೈನ್. ಸಿನಿಮಾದ ಆರಂಭದಲ್ಲೇ ಸುಶಾಂತ್ ಲವ ಲವಿಕೆಯಿಂದ ನಟಿಸಿದ್ದಾರೆ. ಅರೇ ಇವರಿಗೆ ಕ್ಯಾನ್ಸರ್ರಾ? ಅಯ್ಯೋ ಇವರ ಜೀವನ ಹೀಗೆ ಆಗೋಯ್ತಲ್ಲಾ ಎಂದು ನಮಗೇ ಅನಿಸುವಷ್ಟು ಬೇಸರವಾಗುತ್ತದೆ.

ಆದರೆ ನಡುವಿನ ಸಮಯದಲ್ಲಿ ಸುಶಾಂತ್ ಹಾಗೂ ಸಂಜನಾ ಜೋಡಿ ನಮಗೆ ಪ್ರೀತಿಯ ಕಚಗುಳಿಯಿಡುತ್ತದೆ. ಸಣ್ಣ ಪುಟ್ಟದ್ದರಲ್ಲೇ ಸಿಗುವ ಸಂತೋಷವನ್ನು ಅರ್ಥ ಮಾಡಿಸುತ್ತಾರೆ. ಕೊನೆಯದಾಗಿ ಸುಶಾಂತ್ ಹುಟ್ಟು, ಸಾವು ನಮ್ಮ ಕೈಯಲ್ಲಿಲ್ಲ. ಆದರೆ ಅದರ ನಡುವೆ ಬರುವ ಜೀವನವನ್ನು ಹೇಗೆ ಎದುರಿಸಬೇಕೆಂದು ನಾವೇ ನಿರ್ಧರಿಸಬಹುದು ಎನ್ನುತ್ತಾರೆ. ವಿಷಾಧವೆಂದರೆ ಅವರ ನಿಜ ಜೀವನದಲ್ಲಿ ಅದನ್ನು ಅವರು ಎದುರಿಸದೇ ಹೊರಟು ಹೋದರು.

ಇನ್ನು ಚಿತ್ರದುದ್ದಕ್ಕೂ ನಮ್ಮನ್ನು ಸೆರೆಹಿಡಿಯುವುದು ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ಅವರ ಮ್ಯೂಸಿಕ್. ಉತ್ತಮ ಹಾಡುಗಳು ಮತ್ತೆ ಮತ್ತೆ ಕೇಳುವಂತಿದೆ. ಒಮ್ಮೆ ನೋಡಲು ಅಡ್ಡಿಯಿಲ್ಲದ ಸಿನಿಮಾ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ರಿಷಬ್ ಶೆಟ್ಟಿ ಹೇಳಿದ್ದಕ್ಕೆ ಕಾಂತಾರ ಚಾಪ್ಟರ್ 1 ಗಾಗಿ ಮೂರು ದಿನ ಬೀಚ್ ನಲ್ಲಿ ಮಲಗಿದ್ದ ಮಲಯಾಳಿ ನಟ

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

ಮುಂದಿನ ಸುದ್ದಿ
Show comments