ಬಾಲಿವುಡ್‌ನಲ್ಲಿ ಸನ್ನಿಲಿಯೋನ್ ಜೀವನಚರಿತ್ರೆಯ ಸಿನೆಮಾ

Webdunia
ಮಂಗಳವಾರ, 12 ಡಿಸೆಂಬರ್ 2023 (10:38 IST)
ಬಾಲಿವುಡ್‌ನಲ್ಲಿ ಪಡ್ಡೆಹುಡುಗರ ನಿದ್ದೆಗೆಡಿಸಿದ ಸುಂದರಿ ಸನ್ನಿ ಲಿಯೋನ್ ಜೀವನ ಚರಿತ್ರೆ ಸಿನೆಮಾ ರೂಪದಲ್ಲಿ ತೆರೆಗೆ ಬರಲು ಸಿದ್ದವಾಗುತ್ತಿದೆ. ಬಾಲಿವುಡ್ ಖ್ಯಾತ ನಿರ್ಮಾಪಕರೊಬ್ಬರು ಚಿತ್ರವ್ನು ನಿರ್ದೇಶಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
 
ಸನ್ನಿ ಲಿಯೋನ್ ಕುರಿತು ಡಾಕ್ಯುಮೆಂಟರಿ ಚಿತ್ರವೊಂದನ್ನು ತಯಾರಿಸಲು ಖ್ಯಾತ ಫೊಟೊ ಜರ್ನಲಿಸ್ಟ್ ದಿಲೀಪ್ ಮೆಹತಾ ಮುಂದಾಗಿದ್ದಾರಂತೆ. ಈ ಬಗ್ಗೆ ಈಗಾಗಲೇ ಸನ್ನಿ ಜತೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 
 
ಸನ್ನಿ ನೀಲಿ ಚಿತ್ರಗಳ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟವರು. ಜಿಸ್ಮ್ 2 ಚಿತ್ರದಲ್ಲಿ ಅವಕಾಶ ಸಿಗುತ್ತಲೇ ಭಾರತದಲ್ಲೇ ನೆಲೆಸಲು ನಿರ್ಧರಿಸಿದರು. ಅವರ ಪತಿ ಡೇನಿಯಲ್ ವೆಬರ್ ಕೂಡಾ ಇದಕ್ಕೆ ಸಮ್ಮತಿ ನೀಡಿದ್ದಾರೆ.
 
ಆಕೆಯ ಬದುಕು ಎಲ್ಲರಂತಿಲ್ಲ. ಅಂತಹದ್ದೊಂದು ಬದುಕು ಹೇಗಿರುತ್ತದೆ. ಆಕೆ ಯಾವ ರೀತಿ ನೀಲಿ ಚಿತ್ರರಂಗಕ್ಕೆ ಕಾಲಿಟ್ಟಳು, ಯಾವ ಸಂದರ್ಭದಲ್ಲಿ ಅದು ಅನಿವಾರ್ಯವಾಯಿತು, ಅಲ್ಲಿ ಏನೇನು ನೋವು ಅನುಭವಿಸಿದಳು ಎಂಬುದನ್ನು ನಾವು ತೋರಿಸುತ್ತೇವೆ ಎಂದಿದ್ದಾರೆ ದಿಲೀಪ್. 
 
ಅಂದಹಾಗೆ ಈ ಡಾಕ್ಯುಮೆಂಟರಿಯನ್ನು ದಿಲೀಪ್ ಸೋದರಿ ಕಮ್ ನಿರ್ದೇಶಕಿ ದೀಪಾ ಮೆಹತಾ ನಿಮರ್ಿಸುತ್ತಿದ್ದಾರೆ. ಬಾಲಿವುಡ್ ನಟಿಯರಿಗೆ ಈವರೆಗೆ ಸಿಗದ ಅವಕಾಶ ಸನ್ನಿಗೆ ಸಿಕ್ಕಿದೆ. ಇದಕ್ಕಾಗಿ ಅಲ್ಲಿನ ನಟಿಯರೆಲ್ಲಾ ಸನ್ನಿ ಕಡೆಗೆ ಅಚ್ಚರಿಯಿಂದ ಹಾಗೂ ಅಸೂಯೆಯಿಂದ ನೋಡುತ್ತಿದಾರಂತೆ.  ಅಂದ ಹಾಗೆ ಸನ್ನಿ ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್‌ನ್ಯೂಸ್‌, ಮತ್ತೇ ದೊಡ್ಡ ಪರದೆ ಮೇಲೆ ಯಜಮಾನ

ಪವಿತ್ರಾ ಗೌಡಗೆ ಮಾಡಿದಂತೇ ಈ ಕಿರುತೆರೆ ನಟಿಗೂ ಮಾಡ್ತಿದ್ದ ಕಾಮುಕ: ಆದ್ರೆ ನಟಿ ಮಾಡಿದ್ದೇನು

Renukaswamy Case: ತಿಂಗಳ ಬಳಿಕ ದರ್ಶನ್ ಕಂಡಿದ್ದು ಹೀಗೇ

Darshan Court Case Hearing: ಮುಕ್ತಾಯಗೊಂಡ ದೋಷಾರೋಪ, ಇಲ್ಲಿದೆ ಮಹತ್ವದ ಅಪ್ಡೇಟ್

ಕೋರ್ಟ್ ಹಾಲ್ ನಲ್ಲಿ ಸುಬ್ಬ ಮೀಟ್ಸ್ ಸುಬ್ಬಿ: ದರ್ಶನ್ ನೋಡಿ ಪವಿತ್ರಾ ಗೌಡ ಮಾಡಿದ್ದೇನು

ಮುಂದಿನ ಸುದ್ದಿ
Show comments