Select Your Language

Notifications

webdunia
webdunia
webdunia
webdunia

ಶ್ರೀದೇವಿ ಆಸೆಯಂತೆ ನಡೆಯುತ್ತಿದೆ ಅಂತಿಮ ಕ್ರಿಯೆ!

ಶ್ರೀದೇವಿ
ಮುಂಬೈ: ಬಾಲಿವುಡ್ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ಇನ್ನು ಕೆಲವೇ ಕ್ಷಣಗಳಲ್ಲಿ ಮಣ್ಣಲ್ಲಿ ಮಣ್ಣಾಗಿ ಹೋಗಲಿದ್ದಾರೆ. ಮಣ್ಣಾಗುವ ಮೊದಲು ಶ್ರೀದೇವಿ ಆಸೆಯನ್ನು ಕುಟುಂಬ ವರ್ಗ ನೆರವೇರಿಸಿದೆ.
 

ಅಯ್ಯಂಗಾರ್ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನಗಳು ನಡೆಯುತ್ತಿದೆ. ಮುತ್ತೈದೆಯಾಗಿ ಸಾವನ್ನಪ್ಪಿದ ಶ್ರೀದೇವಿಗೆ ಅವರ ಇಷ್ಟದ ಗೋಲ್ಡನ್ ಕಲರ್ ಅಂಚಿನ ಕಾಂಚೀವರಂ ಸೀರೆ ತೊಡಿಸಲಾಗಿದೆ. ಮೋಹನ ಮಾಲೆ ತೊಡಿಸಿ, ಮಲ್ಲಿಗೆ ಹೂವಿನಿಂದ ಅವರ ಅಂತಿಮ ಯಾತ್ರೆಯ ವಾಹನವನ್ನು ಅಲಂಕರಿಸಲಾಗಿದೆ.

ಅಷ್ಟೇ ಅಲ್ಲದೆ, ಶ್ರೀದೇವಿ ಬಹುವಾಗಿ ಇಷ್ಟಪಡುತ್ತಿದ್ದ ಮೇಕಪ್ ಕಿಟ್ ನ್ನೂ ಮೃತದೇಹದ ಜತೆಗೆ ಇರಿಸಲಾಗಿದೆ. ಈ ಮೂಲಕ ಇಷ್ಟದ ವಸ್ತುಗಳೊಂದಿಗೆ ಮಣ್ಣಲ್ಲಿ ಮಣ್ಣಾಗುತ್ತಿದ್ದಾರೆ ಬಾಲಿವುಡ್ ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮೋಹಕ ತಾರೆ ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ ಬಾಲಿವುಡ್ ನಟ, ನಟಿಯರು