ಮುಂಬೈ: ಒಂಟಿ ಕಾಲಿನಲ್ಲಿ ಬಾಲಕಿಯೊಬ್ಬಳು ಶಾಲೆಗೆ ನಡೆದುಹೋಗುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಾಲಕಿಗೆ ಇದೀಗ ನಟ ಸೋನು ಸೂದ್ ನೆರವಾಗಲು ಮುಂದೆ ಬಂದಿದ್ದಾರೆ.
ಕೊವಿಡ್ ವೇಳೆ ಅದೆಷ್ಟೋ ಸಂಕಷ್ಟದಲ್ಲಿದ್ದವರಿಗೆ ಸೋನು ಸೂದ್ ಸ್ವಂತ ಖರ್ಚಿನಿಂದ ನೆರವಾಗಿದ್ದರು. ಇದೀಗ ತಮ್ಮದೇ ಫೌಂಡೇಷನ್ ಮಾಡಿಕೊಂಡು ಕಷ್ಟದ್ದಲ್ಲಿದ್ದವರಿಗೆ ನೆರವಾಗುತ್ತಿದ್ದಾರೆ.
ಇದೀಗ ಬಿಹಾರ ರಾಜ್ಯದ 10 ವರ್ಷದ ಬಾಲಕಿ ಸೀಮಾಗೆ ಶಿಕ್ಷಣದ ಖರ್ಚು ವೆಚ್ಚ ವಹಿಸಲು ಮುಂದಾಗಿದ್ದಾರೆ. ಅಪಘಾತದಲ್ಲಿ ಒಂದು ಕಾಲು ಕಳೆದುಕೊಂಡಿರುವ ಸೀಮಾ ಬಡತನದ ಕಾರಣದಿಂದ 1 ಕಿ.ಮೀ. ಒಂಟಿ ಕಾಲಲ್ಲಿ ನಡೆದೇ ಶಾಲೆಗೆ ಹೋಗುತ್ತಾಳೆ. ಆಕೆಗೀಗ ಸೋನು ಸಹಾಯ ಮಾಡಿದ್ದಾರೆ.