Select Your Language

Notifications

webdunia
webdunia
webdunia
webdunia

ವಿಚಿತ್ರ ಮೇಕಪ್ ನಿಂದ ಟ್ರೋಲ್ ಗೊಳಗಾದ ಗಾಯಕಿ ರಾನು ಮೊಂಡಾಲ್

ವಿಚಿತ್ರ ಮೇಕಪ್ ನಿಂದ ಟ್ರೋಲ್ ಗೊಳಗಾದ ಗಾಯಕಿ ರಾನು ಮೊಂಡಾಲ್
ಮುಂಬೈ , ಸೋಮವಾರ, 18 ನವೆಂಬರ್ 2019 (08:52 IST)
ಮುಂಬೈ: ರೈಲ್ವೇ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಾಲ್ ರಾತ್ರಿ ಬೆಳಗಾಗುವಷ್ಟರಲ್ಲಿ ಬಾಲಿವುಡ್ ಗಾಯಕಿಯಾಗಿ ಮಿಂಚಿದ ಕತೆ ಎಲ್ಲೆಡೆ ಸುದ್ದಿಯಾಗಿತ್ತು. ಆದರೆ ಅದೇ ರಾನು ಮೊಂಡಾಲ್ ಇದೀಗ ಹಲವು ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ.


ಮೊನ್ನೆಯಷ್ಟೇ ಸೆಲ್ಫೀ ಕೇಳಲು ಬಂದ ಅಭಿಮಾನಿಯನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ಟೀಕೆಗೊಳಗಾಗಿದ್ದ ರಾನು ಇದೀಗ ಮುಖಕ್ಕೆ ಯದ್ವಾ ತದ್ವಾ ಮೇಕ್ ಅಪ್ ಬಳಿದುಕೊಂಡು ವಿಚಿತ್ರವಾಗಿ ಕಾಣಿಸಿಕೊಂಡಿರುವುದಕ್ಕೆ ಟ್ರೋಲ್ ಗೊಳಗಾಗಿದ್ದಾರೆ.

ಮುಖಕ್ಕೆ ಯದ್ವಾ ತದ್ವಾ ಮೇಕ್ ಅಪ್ ಮಾಡಿಕೊಂಡಿರುವುದಲ್ಲದೆ, ಲೆಹಂಗಾ ತೊಟ್ಟು ವಿಚಿತ್ರವಾಗಿ ಕಾಣಿಸಿಕೊಂಡಿರುವ ಫೋಟೋಗಳನ್ನು ಟ್ವಿಟರಿಗರು ತಮಾಷೆ ಮಾಡಿದ್ದು, ಆಕೆಯನ್ನು ಭೂತದ ವೇಷಧಾರಿಗೆ, ಹಾರ್ಪಿಕ್ ಬಾಟಲ್ ಜತೆಗೆ ಮೆಮೆ ಮಾಡಿ ಕಾಲೆಳೆದಿದ್ದಾರೆ. ಕೆಲವರು ನಿಮಗೆ ನೀವೇ ಮೇಕ್ ಅಪ್ ಮಾಡಿಕೊಳ್ಳಲು ಹೀಗೇ ಆಗೋದು ಎಂದು ಮಾತಿನ ಮೂಲಕವೇ ಚುಚ್ಚಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀ ವಾಹಿನಿಯಲ್ಲಿ ಮತ್ತೆ ಸರಿಗಮಪ ಶೋ