Select Your Language

Notifications

webdunia
webdunia
webdunia
webdunia

ಗೊಂದಲಕ್ಕೆ ಕಾರಣವಾಗಿದೆ ಶಿಲ್ಪಾ ಶೆಟ್ಟಿ ಹೇಳಿದ ಈ ಕೆಲಸ

ಗೊಂದಲಕ್ಕೆ ಕಾರಣವಾಗಿದೆ ಶಿಲ್ಪಾ ಶೆಟ್ಟಿ ಹೇಳಿದ ಈ ಕೆಲಸ
ಮುಂಬೈ , ಶನಿವಾರ, 28 ಜುಲೈ 2018 (06:40 IST)
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಮಾಡುತ್ತಿರುವ ಒಂದು ಒಳ್ಳೆಯ ಕೆಲಸದ ಬಗ್ಗೆ ಇದೀಗ ಜನರಲ್ಲಿ ಗೊಂದಲವನ್ನುಂಟುಮಾಡಿದೆಯಂತೆ.


ಹೌದು. ನಟಿ ಶಿಲ್ಪಾ ಶೆಟ್ಟಿ ಅವರು ಬೆಳಗಾವಿಯ ಯುವಕ ಒಬ್ಬರು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಬಗ್ಗೆ ನಾನು ಓದಿದ್ದೆ. ಎಚ್,ಐವಿ ಪೀಡಿತ ಮಕ್ಕಳನ್ನು ಅವರು ಪಾಲನೆ ಪೋಷಣೆ ಮಾಡುತ್ತಿದ್ದಾರೆ, ಅವರನ್ನು ಶಾಲೆಯಲ್ಲು ಸಹ ಸೇರಿಸಿಕೊಳ್ಳುವುದಿಲ್ಲ, ಹೀಗಾಗಿ ನನ್ನ ಪತಿ ರಾಜ್ ಕುಂದ್ರಾ ಮತ್ತು ನಾನು ಬೆಳಗಾವಿಯ ಅನಾಥ ಮಕ್ಕಳಿಗೆ ಊಟ, ವಸತಿ ಸೌಲಭ್ಯ ಒದಗಿಸುತ್ತಿದ್ದೇವೆ, ಈ ಕಟ್ಟಡವನ್ನು ನಾವು ಪುನರ್ ನಿರ್ಮಿಸಲು ಬಯಸುತ್ತೇನೆ, ಅದಕ್ಕಾಗಿ ಸುಮಾರು 40 ರಿಂದ 50 ಲಕ್ಷ ರು ಹಣ ಬೇಕಾಗುತ್ತದೆ ಎಂದು ಶಿಲ್ಪಾ ಶೆಟ್ಟಿ ಹೇಳಿದ್ದರು.


 ಹಾಗೇ ಸಲ್ಮಾನ್ ಖಾನ್ ಅರ ದಸ್ ಖಾ ದಮ್ ಕಾರ್ಯಕ್ರಮದಲ್ಲಿ ಗೆದ್ದ 10 ಲಕ್ಷ ರು ಹಣವನ್ನು ಶಿಲ್ಪಾ ಶೆಟ್ಟಿ ಫೌಂಡೇಶನ್ ಮೂಲಕ ಹಣವನ್ನು ಬೆಳಗಾವಿಯ ಅನಾಥ ಮಕ್ಕಳ ಕಲ್ಯಾಣಕ್ಕಾಗಿ ನೀಡುವುದಾಗಿ ತಿಳಿಸಿದ್ದರು. ಆದರೆ ಬೆಳಗಾವಿಯ ಯಾವ ಅನಾಥ ಸಂಸ್ಥೆ ಎಂಬುದನ್ನು ಅವರು ಸ್ಪಷ್ಟವಾಗಿ ಹೇಳಿರಲಿಲ್ಲ.


ಆದಕಾರಣ ನಟಿ ಶಿಲ್ಪಾ ಶೆಟ್ಟಿ ಅವರ ಹೇಳಿಕೆ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಯಾಕೆಂದರೆ ಬೆಳಗಾವಿಯಲ್ಲಿ ಈ ರೀತಿಯ ಯಾವುದೇ ಅನಾಥಾಶ್ರಮಗಳಿಲ್ಲ ಎಂಬುದು ತಿಳಿದು ಬಂದಿದೆ. ಅದರಲ್ಲೂ ಎಚ್ ಐವಿ ಪೀಡಿತ ಮಕ್ಕಳ ಅನಾಥಾಶ್ರಮವಿಲ್ಲ ಎಂಬುದು ತಿಳಿದು ಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದಲ್ಲಿ ಅಂಬಿ ಸ್ಟೈಲ್ ನೋಡಿ ಫಿದಾ ಆದ ಕನ್ನಡದ ನಟಿ ಯಾರು ಗೊತ್ತಾ?