ಮುಂಬೈ: ನೀಲಿ ಚಿತ್ರಗಳನ್ನು ನಿರ್ಮಿಸುತ್ತಿರುವ ಆಪಾದನೆ ಮೇರೆಗೆ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಪತ್ನಿ ನಟಿ, ಶಿಲ್ಪಾ ಶೆಟ್ಟಿ ಈಗ ಗಂಡನ ಪರವಾಗಿ ಮಾತನಾಡಿದ್ದಾರೆ.
ನಿನ್ನೆ ತನಿಖಾ ತಂಡ ಶಿಲ್ಪಾ ನಿವಾಸದಲ್ಲಿ ತಪಾಸಣೆ ನಡೆಸಿತ್ತು. ಈ ವೇಳೆ ತನ್ನ ಗಂಡ ನಿರ್ಮಿಸಿದ್ದು ಬ್ಲೂ ಫಿಲಂ ಅಲ್ಲ, ಆದರೆ ಉದ್ರೇಕಕಾರಿ ಸಿನಿಮಾಗಳು ಎಂದು ವಾದಿಸಿದ್ದರು ಎನ್ನಲಾಗಿದೆ. ಅಲ್ಲದೆ, ಕೆಲವು ಒಟಿಟಿ ಫಾರ್ಮ್ಯಾಟ್ ಗಳಲ್ಲಿ ಇದ್ದಕ್ಕಿಂತ ಅಶ್ಲೀಲ ಎನಿಸುವ ಸಿನಿಮಾಗಳಿವೆ ಎಂದು ವಾದಿಸಿದ್ದಾಗಿ ತಿಳಿದುಬಂದಿದೆ.
ಮನೆ ತಪಾಸಣೆ ವೇಳೆ ಕೆಲವು ಇಲೆಕ್ಟ್ರಾನಿಕ್ ವಸ್ತುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು, ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಶಿಲ್ಪಾ ತಮ್ಮ ಪತಿ ನಡೆಸುತ್ತಿರುವ ವಿಹಾನ್ ಇಂಡಸ್ಟ್ರೀಸ್ ಕಂಪನಿಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಇದೀಗ ಪೊಲೀಸರು ಬ್ಲೂ ಫಿಲಂ ಪ್ರಕರಣದಲ್ಲಿ ಶಿಲ್ಪಾಗೂ ನಂಟಿದೆಯೇ ಎಂದು ತನಿಖೆ ನಡೆಸಲಿದ್ದಾರೆ.