Publish Date: Fri, 23 Jul 2021 (14:42 IST)
Updated Date: Fri, 23 Jul 2021 (14:45 IST)
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಕಳೆದ ಒಂದೂವರೆ ವರ್ಷದಲ್ಲಿ ನೂರಕ್ಕೂ ಹೆಚ್ಚು ನೀಲಿ ಚಿತ್ರಗಳನ್ನು ನಿರ್ಮಿಸಿದ್ದರು ಎಂದು ಮುಂಬೈ ಪೊಲೀಸರು ಹೇಳಿದ್ದಾರೆ.
ಉದ್ಯಮಿ ರಾಜ್ ಕುಂದ್ರಾ ಪ್ರಸ್ತುತ ಬಂಧನದಿಂದ ಪಾರಾಗಲು 25 ಲಕ್ಷ ರೂ. ಲಂಚದ ಆಮೀಷ ಒಡ್ಡಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣವನ್ನು ಎಸಿಬಿ ತನಿಖೆ ಕೈಗೆತ್ತಿಕೊಂಡಿದೆ. ಇದರ ನಡುವೆ ರಾಜ್ ಕುಂದ್ರಾ ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಪೊಲೀಸರು ಆರೋಪಿಸಿದ್ದಾರೆ.
ರಾಜ್ ಕುಂದ್ರಾ ಅವರ ಮುಂಬೈನ ಅಂಧೇರಿಯಲ್ಲಿರುವ ಕಚೇರಿ ಮೇಲೆ ದಾಳಿ ಮಾಡಿದಾಗ 100ಕ್ಕೂ ಹೆಚ್ಚು ನೀಲಿ ಚಿತ್ರಗಳ ಸಂಗ್ರಹ ಸೇರಿದಂತೆ ಭಾರೀ ದಾಖಲೆ ಸಂಗ್ರಹಿಸಿದೆ ಎಂದು ಹೇಳಲಾಗಿದೆ.
ನೀಲಿ ಚಿತ್ರಗಳ ತಯಾರಿ, ಸಂಗ್ರಹ ಹಾಗೂ ಪ್ರಸಾರಕ್ಕೆ ಸಂಬಂಧಿಸಿದ ಸರ್ವರ್, ಕಂಪ್ಯೂಟರ್ ಡಾಟಾ, 2019ರಿಂದಲೇ ರಾಜ್ ಕುಂದ್ರಾ ನೀಲಿ ಚಿತ್ರಗಳ ನಿರ್ಮಾಣ ಆರಂಭಿಸಿದ್ದು, ಇದರಿಂದ ಕೋಟ್ಯಂತರ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಪೊಲೀಸರು ಮೂಲಗಳು ತಿಳಿಸಿವೆ.