Select Your Language

Notifications

webdunia
webdunia
webdunia
webdunia

ಜುಲೈ 23ರವರೆಗೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸ್ ವಶಕ್ಕೆ!

ಜುಲೈ 23ರವರೆಗೆ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೊಲೀಸ್ ವಶಕ್ಕೆ!
ಮುಂಬೈ , ಬುಧವಾರ, 21 ಜುಲೈ 2021 (09:23 IST)
ಮುಂಬೈ(ಜು.21): ನೀಲಿ ಚಿತ್ರಗಳ ಚಿತ್ರೀಕರಣ ಮತ್ತು ಅದರ ವ್ಯಾಪಾರದಲ್ಲಿ ತೊಡಗಿದ್ದ ಆರೋಪದಲ್ಲಿ ಬಂಧಿತ ಉದ್ಯಮಿ ರಾಜ್ ಕುಂದ್ರಾ ಅವರನ್ನು ಜ.23ರವರೆಗೂ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಕುಂದ್ರಾ, ಅಶ್ಲೀಲ ವಿಡಿಯೋ ಮೂಲಕ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಖಚಿತ ಸಾಕ್ಷ್ಯವಿದೆ. ಅವರನ್ನು ಇನ್ನಷ್ಟುವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ ಅವರನ್ನು ಗರಿಷ್ಠ ಅವಧಿಗೆ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಕೋರ್ಟ್ಗೆ ಮನವಿ ಮಾಡಿದ್ದರು.

* ನೀಲಿ ಚಿತ್ರಗಳ ಚಿತ್ರೀಕರಣ ಮತ್ತು ಅದರ ವ್ಯಾಪಾರದಲ್ಲಿ ತೊಡಗಿದ್ದ ಆರೋಪ
* ಉದ್ಯಮಿ ರಾಜ್ ಕುಂದ್ರಾ ಜ.23ರವರೆಗೂ ಪೊಲೀಸ್ ವಶಕ್ಕೆ
* ಕುಂದ್ರಾ, ಅಶ್ಲೀಲ ವಿಡಿಯೋ ಮೂಲಕ ಹಣ ಸಂಪಾದನೆ ಮಾಡುತ್ತಿದ್ದ ಬಗ್ಗೆ ಖಚಿತ ಸಾಕ್ಷ್ಯ

ಅಲ್ಲದೆ ಹಲವು ಆ್ಯಪ್ಗಳ ಮೂಲಕ ಕುಂದ್ರಾ ಇಂಥ ದಂಧೆ ನಡೆಸುತ್ತಿದ್ದ ಬಗೆಗಿನ ಹಲವು ವಾಟ್ಸಾಪ್ ಸಂದೇಶಗಳು ಲಭ್ಯವಾಗಿದೆ. ಕುಂದ್ರಾ ಬಂಧನದ ಬೆನ್ನಲ್ಲೇ ಆತನಿಂದ ವಂಚನೆಗೆ ಒಳಗಾದ ಮೂರು ಮಹಿಳೆಯರು ದೂರು ನೀಡಲು ಮುಂದೆ ಬಂದಿದ್ದಾರೆ. ಮಾಡೆಲಿಂಗ್ ಮತ್ತು ನಟನೆಗೆ ಅವಕಾಶ ಹುಡುಕಿ ಮುಂಬೈಗೆ ಬರುವ ಮಾಡೆಲ್, ಕಲಾವಿದರನ್ನು, ಕೆಲಸಗಾರರನ್ನು ತನ್ನ ಬಲೆಗೆ ಬೀಳಿಸಿ ಬೀಳಿಸಿ ಬಳಿಕ ನೀಲಿ ಚಿತ್ರಗಳಲ್ಲಿ ಅಭಿನಯಿಸುವಂತೆ ಮಾಡುತ್ತಿದ್ದ. ಇದನ್ನು ಬೇರೆ ಬೇರೆ ಆ್ಯಪ್ಗಳಿಗೆ ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ಕುಂದ್ರಾನ ಆಪ್ತ ಉಮೇಶ್ ಕಾಮತ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಹೊಸ ರೈಲಿನ ವೇಗ 600 ಕಿ.ಮೀ!