ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಸಂಜಯ್ ಎಂಬ
ನಟೋರಿಯಸ್ ಕ್ರಿಮಿನಲ್ ನನ್ನು ಸೆರೆ ಹಿಡಿದಿದ್ದಾರೆ. ಈ ಆರೋಪಿಯು ೨೦೧೩ ರಿಂದ ೨೦೨೧ರ ವರೆಗೆ ಅನೇಕ ಕ್ರೈಂ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೊಲೆ ,ಕೊಲೆಯತ್ನ, ದರೋಡೆ, ಸುಲಿಗೆ, ರಾಬರಿ ,ಗಾಂಜಾ ಮಾರಾಟ, ಸಾರ್ವಜನಿಕರ ಪ್ರಕರಣಗಳಲ್ಲಿ ತನ್ನದೇ ಆದ ಹವಾ ಮೆಂಟೇನ್ ಮಾಡಿದ್ದ.
ಈ ಹಿಂದೆ ಅನೇಕ ಬಾರಿ ಜೈಲಿಗೆ ಹೋಗಿರುವ ಸಂಜಯ್ , ಜಾಮೀನು ಪಡೆದು ಹೊರಬಂದು ನಿರಂತರ ಕಾನೂನುಬಾಹಿರ ಚಟುವಟಿಕೆಗೆ ಒಳಗಾಗುತ್ತಿದ್ದ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ.