Select Your Language

Notifications

webdunia
webdunia
webdunia
webdunia

ನಾನು ಯಾರಿಗೂ ಮೋಸ ಮಾಡಿಲ್ಲ: ಅರುಣಾ ಕುಮಾರಿ

bangalore
bangalore , ಬುಧವಾರ, 14 ಜುಲೈ 2021 (19:53 IST)
ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು. ಕಾನೂನಿನ ಪ್ರಕಾರ ಸಾಬೀತಾದ್ರೆ ಶಿಕ್ಷೆ ಅನುಭವಿಸ್ತೀನಿ ಎಂದು 25 ಕೋಟಿ ಸಾಲದ ನೆಪದಲ್ಲಿ ನಟ ದರ್ಶನ್ ಅವರನ್ನು ವಂಚಿಸಲು ಯತ್ನಿಸಿದ ಪ್ರಕರಣ ಆರೋಪಿ ಅರುಣಾ ಕುಮಾರಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ನಿಜಕ್ಕೂ ಅನ್ಯಾಯವಾಗಿದೆ. ಹೆಣ್ಣು ನಾನು ಬಿಟ್ಟು ಬಿಡಿ. ನಾನು ಯಾರಿಂದಲೂ 25 ಲಕ್ಷ ಪಡೆದಿಲ್ಲ ಎಂದು ಉದ್ಯಮಿ ನಾಗವರ್ಧನ್ ಆರೋಪ ತಳ್ಳಿ ಹಾಕಿದರು.
ದರ್ಶನ್ ಬಗ್ಗೆ ಮಾತನಾಡೋಕೆ ಯೋಗ್ಯತೆಯಿಲ್ಲ. ಅವರ ಮನೆಗೆ ಹೋಗಿದ್ದು ಮಾಧ್ಯಮಗಳಿಗೆ ಹೇಳಬೇಕಿಲ್ಲ. ಎರಡು ದಿನ ಕಾಯಿರಿ. ಎಲ್ಲಾ ಹೊರಗೆ ಬರುತ್ತೆ. ನನಗೆ ಅನ್ಯಾಯ ಆಗಿದ್ದು, ಕಾನೂನಿಡಿ ಉಮಾಪತಿ ವಿರುದ್ಧ ಹೋರಾಟ ನಡೆಸುತ್ತೇನೆ ಎಂದು ಅವರು ಹೇಳಿದರು.
ಮೊದಲೇ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಪ್ರೂವ್ ಆಗೋವರೆಗೂ ಕಾಯಿರಿ. ನನಗೆ ಎಲ್ಲವನ್ನು ಹೇಳುವ ಅಗತ್ಯವಿಲ್ಲ. ನಾಗವರ್ಧನ್ ಯಾರು ಎಂಬುದೇ ನನಗೆ ಗೊತ್ತಿಲ್ಲ. ನಾನು ಸುಳ್ಳು ಹೇಳಿದ್ದರೆ ಶಿಕ್ಷೆಯಾಗಲಿ ಎಂದು ಅರುಣಾ ಕುಮಾರಿ ಸವಾಲು ಹಾಕಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ 1990 ಕೊರೊನಾ ಸೋಂಕು ಪ್ರಕರಣ ಪತ್ತೆ. 45 ಸೋಂಕಿತರು ಸಾವು