Select Your Language

Notifications

webdunia
webdunia
webdunia
webdunia

ದೀಪಾವಳಿ ವಿಶ್ ಮಾಡಿ ಟ್ರೋಲ್ ಆದ ನಟ ಶಾರುಖ್ ಖಾನ್

webdunia
ಮಂಗಳವಾರ, 29 ಅಕ್ಟೋಬರ್ 2019 (10:19 IST)
ಮುಂಬೈ: ಮುಸ್ಲಿಂ ಧರ್ಮಕ್ಕೆ ಸೇರಿದವರಾದ ನಟ ಶಾರುಖ್ ಖಾನ್ ಹಿಂದೂಗಳ ಧಾರ್ಮಿಕ ಹಬ್ಬ ದೀಪಾವಳಿಯನ್ನು ಆಚರಿಸಿದ ರೀತಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.


ಶಾರುಖ್ ಮುಸ್ಲಿಮ್ ಧರ್ಮೀಯರಾದರೆ, ಪತ್ನಿ ಗೌರಿ ಅಪ್ಪಟ ಹಿಂದೂ ಧರ್ಮೀಯರು. ತಮ್ಮ ಮನೆಯಲ್ಲಿ ಎರಡೂ ಧರ್ಮದ ಆಚರಣೆಗಳನ್ನು ಸಮನಾಗಿ ಮಾಡುತ್ತೇವೆ ಎಂದು ಸ್ವತಃ ಶಾರುಖ್ ಆಗಾಗ ಹೇಳುತ್ತಿರುತ್ತಾರೆ. ಅದೇ ರೀತಿ ದೀಪಾವಳಿಯನ್ನೂ ಆಚರಿಸಿದ್ದಾರೆ.

ಆದರೆ ಕೆಲವರಿಗೆ ಕೆಂಗಣ್ಣಿಗೆ ಗುರಿಯಾಗಿದ್ದು ಶಾರುಖ್ ತಮ್ಮ ಹಣೆಗೆ ತಿಲಕವಿಟ್ಟಿದ್ದು. ಪತ್ನಿ ಗೌರಿ ಮತ್ತು ಕಿರಿಯ ಪುತ್ರ ಅಬ್ ರಾಮ್ ಜತೆಗೆ ಹಣೆಗೆ ತಿಲಕವಿಟ್ಟ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಶಾರುಖ್ ದೀಪಾವಳಿಗೆ ವಿಶ್ ಮಾಡಿದ್ದರು. ಇದನ್ನು ನೋಡಿ ಹಲವರು ಶಾರುಖ್ ರನ್ನು ನೀವು ಫೇಕ್ ಮುಸ್ಲಿಂ ಎಂದು ಜರೆದಿದ್ದಾರೆ. ಶಾರುಖ್ ಟ್ರೋಲ್ ಆಗುತ್ತಿದ್ದಂತೇ ಅವರ ನೆರವಿಗೆ ಬಂದಿರುವ ಶಬ್ನಂ ಅಜ್ಮಿ, ಮುಸ್ಲಿಂ ಧರ್ಮ ಅಷ್ಟೊಂದು ದುರ್ಬಲವಲ್ಲ. ಇಲ್ಲಿ ಎಲ್ಲಾ ಆಚರಣೆಗೂ ಅವಕಾಶವಿದೆ ಎಂದು ಸಮರ್ಥಿಸಿದ್ದಾರೆ.

Share this Story:

Follow Webdunia Hindi

ಮುಂದಿನ ಸುದ್ದಿ

ಬಿಗ್ ಬಾಸ್ ವೇದಿಕೆ ಮೇಲೆ ಕಿಚ್ಚ ಸುದೀಪ್ ಕೋಪಕ್ಕೆ ಕಾರಣವಾದ ಚೈತ್ರಾ ವಾಸುದೇವನ್