ಆನ್ ಲೈನ್ ನಲ್ಲಿ ಒಳ ಉಡುಪು ಮಾತ್ರ ಖರೀದಿ ಮಾಡಲ್ವಂತೆ ಶಾರುಖ್ ಖಾನ್!

ಶನಿವಾರ, 18 ಜನವರಿ 2020 (09:38 IST)
ಮುಂಬೈ: ಬಿಗ್ ಬಾಸ್ಕೆಟ್, ಅಮೆಝೋನ್ ನಂತಹ ಆನ್ ಲೈನ್ ಮಾರುಕಟ್ಟೆ ಕಂಪನಿಗಳಿಗೆ ರಾಯಭಾರಿಯಾಗಿರುವ ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ಒಳ ಉಡುಪು ಮಾತ್ರ ಆನ್ ಲೈನ್ ಲ್ಲಿ ಖರೀದಿ ಮಾಡಲ್ವಂತೆ!


ಹಾಗಂತ ಅವರೇ ಅಮೆಝೋನ್ ಸಂಸ್ಥೆಯ ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ನಮ್ಮ ಮನೆಗೆ ಬೇಕಾದ ಎಲ್ಲಾ ವಸ್ತುಗಳನ್ನೂ ಆನ್ ಲೈನ್ ನಲ್ಲೇ ಖರೀದಿ ಮಾಡುತ್ತೇನೆ. ಆದರೆ ಒಳ ಉಡುಪು ಒಂದನ್ನು ಬಿಟ್ಟು ಎಂದಿದ್ದಾರೆ ಶಾರುಖ್. ಅದಕ್ಕೆ ಕಾರಣವೇನು ಎಂದೂ ಅವರೇ ಹೇಳಿಕೊಂಡಿದ್ದಾರೆ.

ಎಲ್ಲಾ ಓಕೆ ಆದರೆ ಒಳ ಉಡುಪನ್ನು ಮಾತ್ರ ಆನ್ ಲೈನ್ ನಲ್ಲಿ ಖರೀದಿಸುವುದು ನನಗೆ ಇರಿಸು ಮುರಿಸು ಉಂಟು ಮಾಡುತ್ತದೆ. ಯಾಕೆಂದರೆ ಅದು ಪಕ್ಕಾ ವೈಯಕ್ತಿಕ ವಿಚಾರ ಎಂದು ಶಾರುಖ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಸ್ಪಿ ಬಾಲಸುಬ್ರಹ್ಮಣ್ಯಂ ಹಾಡಿಗೆ ಪುನೀತ್ ರಾಜಕುಮಾರ್ ಡ್ಯಾನ್ಸ್