ಕ್ರಿಕೆಟ್ ಕಣಕ್ಕೆ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ! ಫೋಟೋ ವೈರಲ್

ಬುಧವಾರ, 15 ಜನವರಿ 2020 (09:04 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ಜೀರೋ ನಂತರ ಹೊಸ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಭಾರತೀಯ ಕ್ರಿಕೆಟ್ ತಂಡದ ಸಮವಸ್ತ್ರದಲ್ಲಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ಕ್ರಿಕೆಟ್ ಅಂಗಣದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಬೌಲರ್ ಜೂಲಾನ್ ಗೋಸ್ವಾಮಿ ಜತೆಗೆ ಟೀಂ ಇಂಡಿಯಾ ಸಮವಸ್ತ್ರ ಧರಿಸಿ ಮೈದಾನದಲ್ಲಿರುವ ಅನುಷ್ಕಾ ಫೋಟೋ ಈಗ ವೈರಲ್ ಆಗಿದೆ. ಮೂಲಗಳ ಪ್ರಕಾರ ಅನುಷ್ಕಾ ಜೂಲಾನ್ ಗೋಸ್ವಾಮಿ ಬಯೋಪಿಕ್ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಈ ಸಿನಿಮಾದಲ್ಲಿ ಜೂಲಾನ್ ಗೋಸ್ವಾಮಿ ಪಾತ್ರ ಮಾಡಲಿರುವ ಅನುಷ್ಕಾ ಅದಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿಯೇ ಅನುಷ್ಕಾ ಕ್ರಿಕೆಟ್ ಸಮವಸ್ತ್ರದಲ್ಲಿ ಮೈದಾನದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅನುಷ್ಕಾ ಕಡೆಯಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕಿಚ್ಚ ಸುದೀಪ್ ಮೇಲಿನ ಅಭಿಮಾನದಿಂದ ಈ ಗ್ರಾಮಸ್ಥರು ಮಾಡಿದ್ದೇನು ಗೊತ್ತಾ?