Publish Date: Tue, 14 Nov 2023 (09:00 IST)
Updated Date: Tue, 14 Nov 2023 (09:11 IST)
ಮುಂಬೈ: ಸಲ್ಮಾನ್ ಖಾನ್ ನಾಯಕರಾಗಿರುವ ಟೈಗರ್ 3 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮೊದಲ ದಿನದ ಭರ್ಜರಿ ಗಳಿಕೆ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದೆ.
ಟೈಗರ್ 3 ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಅದರಂತೆ ಮೊದಲ ದಿನ ಸಿನಿಮಾ 44 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ದೀಪಾವಳಿಗೆ ಸಾಲು ಸಾಲು ರಜೆ ಹೊರತಾಗಿಯೂ ಚಿತ್ರ ನಿರೀಕ್ಷಿತ ಗಳಿಕೆ ಮಾಡಲು ವಿಫಲವಾಗಿದೆ ಎನ್ನಲಾಗಿದೆ.
ಎರಡು ಮತ್ತು ಮೂರನೇ ದಿನಕ್ಕೆ ಚಿತ್ರದ ಗಳಿಕೆಯಲ್ಲಿ ಕೊಂಚ ಹಿನ್ನಡೆಯಾಗಿದೆ. ಟೈಗರ್ 3 ಮೊದಲ ದಿನವೇ ಜವಾನ್ ದಾಖಲೆಯನ್ನು ಹಿಂದಿಕ್ಕಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಅದು ಸುಳ್ಳಾಗಿದೆ.