Select Your Language

Notifications

webdunia
webdunia
webdunia
webdunia

ಗಾಯಕಿ ಸೋನಾ ಮೊಹಾಪಾತ್ರರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಸಲ್ಮಾನ್ ಖಾನ್ ಅಭಿಮಾನಿಗಳು

ಗಾಯಕಿ ಸೋನಾ ಮೊಹಾಪಾತ್ರರನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ  ಸಲ್ಮಾನ್ ಖಾನ್ ಅಭಿಮಾನಿಗಳು
ಮುಂಬೈ , ಗುರುವಾರ, 30 ಮೇ 2019 (09:48 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ವಿರುದ್ಧ ಒಂದಾದ ಮೇಲೊಂದು ಟ್ವೀಟ್ ದಾಳಿ ಮಾಡುವ ಗಾಯಕಿ ಸೋನಾ ಮೊಹಾಪತ್ರಗೆ ಅಭಿಮಾನಿಗಳು ಕೊಲೆ ಬೆದರಿಕೆ ಹಾಕಿದ್ದಾರೆ.

 

ಭಾರತ್ ಸಿನಿಮಾದಲ್ಲಿ ಕೊನೆಯ ಕ್ಷಣದಲ್ಲಿ ಅಭಿನಯಿಸಲು ಒಲ್ಲೆ ಎಂದ ಪ್ರಿಯಾಂಕಾ ಚೋಪ್ರಾ ಬಗ್ಗೆ ಆಗಾಗ ಟಾಂಗ್ ಕೊಡುವ ಸಲ್ಮಾನ್ ಖಾನ್ ಗೆ ಸೋನಾ ಟ್ವಿಟರ್ ಮೂಲಕ ತಿರುಗೇಟು ನೀಡಿದ್ದರು. ಇದು ಸಲ್ಮಾನ್ ಅಭಿಮಾನಿಗಳನ್ನು ಸಿಟ್ಟಿಗೆಬ್ಬಿಸಿದೆ. ಅವಕಾಶ ಸಿಕ್ಕಿದಾಗಲೆಲ್ಲಾ ಸಲ್ಮಾನ್ ರನ್ನು ಹೀಯಾಳಿಸುವ ಸೋನಾಗೆ ಸಲ್ಲು ಅಭಿಮಾನಿಗಳು ಬಾಯಿ ಮುಚ್ಚದಿದ್ದರೆ ಕೊಲೆ ಮಾಡಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ಆದರೆ ಇಂತಹ ಬೆದರಿಕೆಯ ಮೇಲ್ ಗಳಿಗೆಲ್ಲಾ ತಾನು ಹೆದರುವುದಿಲ್ಲ. ಈ ಕೆಟ್ಟ ಸ್ವಭಾವದ ಸ್ಟಾರ್ ನ ಅಭಿಮಾನಿಗಳೆನಿಸಿಕೊಂಡವರು ಅದೆಷ್ಟೋ ಬಾರಿ ನನಗೆ ಈ ರೀತಿಯ ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಇದಕ್ಕೆಲ್ಲಾ ಹೆದರವುದಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಂಜೀವಿ ಸರ್ಜಾ `ಕ್ಷತ್ರಿಯ’ ಶುರುವಾಯ್ತು!