ಮುಂಬೈ: ಅಮಿತಾಭ್ ಬಚ್ಚನ್ ಜೊತೆ ಗುಡ್ ಬೈ ಎನ್ನುವ ಬಾಲಿವುಡ್ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ಮಂದಣ್ಣ ಈಗ ಚಿತ್ರದ ಪ್ರಮೋಷನ್ ವೇಳೆ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾದ ಘಟನೆ ನಡೆದಿದೆ.
ಗುಡ್ ಬೈ ಸಿನಿಮಾ ಪ್ರಚಾರಕ್ಕಾಗಿ ಗ್ಲಾಮರಸ್ ಡ್ರೆಸ್ ನಲ್ಲಿ ಬಂದಿದ್ದ ರಶ್ಮಿಕಾ ನಡೆದು ಬರುತ್ತಿದ್ದಾಗ ಅವರ ಬ್ಲೌಸ್ ಕೊಂಚ ಜಾರಿದ್ದು, ಅತ್ತ ವೇಲ್ ಕೂಡಾ ಹಾರಿದೆ. ಇದರಿಂದ ಮುಜುಗರಕ್ಕೀಡಾದ ರಶ್ಮಿಕಾ ಬ್ಲೌಸ್ ಸರಿಮಾಡುವಷ್ಟರಲ್ಲಿ ಪಕ್ಕದಲ್ಲಿದ್ದ ಅವರ ಸಹಾಯಕಿ ಶಾಲು ಸರಿ ಮಾಡಿ ಸಹಾಯ ಮಾಡಿದರು.
ಇದಕ್ಕೂ ಮೊದಲೂ ಹಲವು ಬಾರಿ ರಶ್ಮಿಕಾ ತಮ್ಮ ಡ್ರೆಸ್ ನಿಂದಾಗಿ ಮುಜುಗರಕ್ಕೀಡಾಗಿದ್ದರು. ಈಗ ಮತ್ತೆ ಅಂತಹದ್ದೇ ಸಂದರ್ಭ ಎದುರಾಗಿದೆ. ಇದರಿಂದಾಗಿ ರಶ್ಮಿಕಾ ಟ್ರೋಲ್ ಆಗಿದ್ದಾರೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!