Publish Date: Tue, 27 Sep 2022 (08:00 IST)
Updated Date: Tue, 27 Sep 2022 (08:44 IST)
ಹೈದರಾಬಾದ್: ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾ ಶೂಟಿಂಗ್ ಪುನರಾರಂಭವಾಗಿದ್ದು, ಶೂಟಿಂಗ್ ದೃಶ್ಯಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದವು.
ಪ್ರಭಾಸ್ ಅಭಿನಯದ ಆಕ್ಷನ್ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಮೊನ್ನೆ ವೈರಲ್ ಆಗಿತ್ತು. ಯಾರೋ ಸೆಟ್ ನಲ್ಲಿದ್ದವರೇ ಫೋಟೋ ಹರಿಯಬಿಟ್ಟಿದ್ದರು. ಇದರಿಂದ ನಿರ್ದೇಶಕ ಪ್ರಶಾಂತ್ ನೀಲ್ ಗರಂ ಆಗಿದ್ದಾರೆ.
ಹೀಗಾಗಿ ಇನ್ನು ಮುಂದೆ ಸೆಟ್ ನಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸುವಂತಿಲ್ಲ ಎಂದು ನಿಯಮ ಜಾರಿಗೆ ತಂದಿದ್ದಾರೆ. ಈ ಮೊದಲು ರಾಜಮೌಳಿಯವರು ಆರ್ ಆರ್ ಆರ್ ಸಿನಿಮಾ ಚಿತ್ರೀಕರಣಕ್ಕೂ ಇದೇ ನಿಯಮ ಮಾಡಿದ್ದರು. ಈಗ ಪ್ರಶಾಂತ್ ನೀಲ್ ಕೂಡಾ ಇದೇ ನಿಯಮ ಜಾರಿಗೆ ತಂದಿದ್ದಾರೆ.