Select Your Language

Notifications

webdunia
webdunia
webdunia
webdunia

ಮಣಿರತ್ನಂ ಸಿನಿಮಾಗಳನ್ನು ಐಶ್ವರ್ಯಾ ರೈ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳುವುದು ಯಾಕೆ?

ಮಣಿರತ್ನಂ ಸಿನಿಮಾಗಳನ್ನು ಐಶ್ವರ್ಯಾ ರೈ ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳುವುದು ಯಾಕೆ?
ಮುಂಬೈ , ಸೋಮವಾರ, 26 ಸೆಪ್ಟಂಬರ್ 2022 (08:40 IST)
ಮುಂಬೈ: ಪೊನ್ನಿಯನ್ ಸೆಲ್ವನ್ 1 ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ಐಶ್ವರ್ಯಾ ರೈ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.

ಮಣಿರತ್ನಂ ನಿರ್ದೇಶನದ ಹೆಚ್ಚಿನ ಸಿನಿಮಾಗಳಲ್ಲಿ ಐಶ್ವರ್ಯಾ ಇದ್ದೇ ಇರುತ್ತಾರೆ. ಅವರ ಕಾಂಬಿನೇಷನ್ ನ ಹೆಚ್ಚಿನ ಸಿನಿಮಾಗಳೂ ಹಿಟ್ ಆಗಿವೆ. ಅಷ್ಟಕ್ಕೂ ಬಾಲಿವುಡ್ ನ ಬೇಡಿಕೆಯ ನಟಿ ಐಶ್ವರ್ಯಾ ಮಣಿರತ್ನಂ ಸಿನಿಮಾಗಳನ್ನು ಹಿಂದೆ ಮುಂದೆ ನೋಡದೇ ಒಪ್ಪಿಕೊಳ್ಳುವುದೇಕೆ?

ಐಶ್ವರ್ಯಾ ಮಣಿರತ್ನಂ ನಿರ್ದೇಶನದ ಇರುವರ್ ಸಿನಿಮಾ ಮೂಲಕ ವೃತ್ತಿರಂಗಕ್ಕೆ ಕಾಲಿಟ್ಟಿದ್ದರು. ಆಗ ಐಶ್ವರ್ಯಾಗೆ ನಟನೆಯ ಎಬಿಸಿಡಿಯೂ ಗೊತ್ತಿರಲಿಲ್ಲ. ಹಾಗಿದ್ದರೂ ಮಣಿರತ್ನಂ ಅವರಿಗೆ ಎಲ್ಲವನ್ನೂ ಕಲಿಸಿದರು. ಹೀಗಾಗಿ ತಮ್ಮ ಪಾಲಿಗೆ ಮಣಿರತ್ನಂ ಒಂದು ರೀತಿಯಲ್ಲಿ ಗುರು ಇದ್ದಂತೆ. ಅವರ ಬಳಿ ಎಲ್ಲವೂ ಕಲಿಯಲು ಅವಕಾಶವಿರುತ್ತದೆ. ಅವರ ಜೊತೆ ಕೆಲಸ ಮಾಡುವುದು ಒಂದು ಕನಸಿನ ಅನುಭವ ಎಂದಿದ್ದಾರೆ ಐಶ್ವರ್ಯಾ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂತಾರ ಬುಕಿಂಗ್ ಇಂದಿನಿಂದ ಶುರು: ಬಿಡುಗಡೆಗೂ ಮೊದಲೇ ಸಿನಿಮಾ ನೋಡಿ!