Publish Date: Sun, 25 Sep 2022 (09:10 IST)
Updated Date: Sun, 25 Sep 2022 (09:23 IST)
ಹೈದರಾಬಾದ್: ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದು ಸಂಭಾವನೆ ವಿಚಾರದಲ್ಲೂ ಮುಂದಿದ್ದಾರೆ.
ಇಂತಿಪ್ಪ ರಶ್ಮಿಕಾ ಬಳಿ ದುಬಾರಿ ಕಾರು, ಬಂಗಲೆ ಎಲ್ಲವೂ ಇದೆ. ಅವರ ಬಳಿಯಿರುವ ಅತ್ಯಂತ ದುಬಾರಿ ಕಾರು ಎಂದರೆ 50 ಲಕ್ಷ ರೂ.ಗಳ ಮರ್ಸಿಡಸ್ ಬೆಂಜ್ ಕಾರು. ಇದನ್ನು ಬಿಟ್ಟರೆ 40 ಲಕ್ಷ ರೂ.ಗಳ ಆಡಿ ಕ್ಯು3 ಟಯೋಟಾ ಇನ್ನೋವಾ, ಹುಂಡೈ ಕ್ರೇಟಾ ಕಾರುಗಳನ್ನೂ ಅವರು ಹೊಂದಿದ್ದಾರೆ.
ಇದಲ್ಲದೆ ಹೈದರಾಬಾದ್, ಮುಂಬೈನಲ್ಲಿ ಸ್ವಂತ ಫ್ಲ್ಯಾಟ್ ಹೊಂದಿರುವ ರಶ್ಮಿಕಾ ಪ್ರತೀ ಸಿನಿಮಾಗೆ 5 ಕೋಟಿ ವರೆಗೆ ಸಂಭಾವನೆಯನ್ನೂ ಪಡೆಯುತ್ತಾರೆ. ದಿನೇ ದಿನೇ ಅವರ ಜನಪ್ರಿಯತೆಯೂ ಹೆಚ್ಚುತ್ತಿದೆ.