Select Your Language

Notifications

webdunia
webdunia
webdunia
webdunia

ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದ ವಿಕ್ರಮ್, ಕಾರ್ತಿ, ತ್ರಿಶಾ

webdunia
ಬೆಂಗಳೂರು , ಶುಕ್ರವಾರ, 23 ಸೆಪ್ಟಂಬರ್ 2022 (09:00 IST)
ಬೆಂಗಳೂರು: ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಪಾರ್ಟ್ 1 ಸಿನಿಮಾ ಪ್ರಚಾರಾರ್ಥವಾಗಿ ಚಿತ್ರತಂಡ ಬೆಂಗಳೂರಿಗೆ ಬಂದಿದೆ.

ಚಿತ್ರದ ನಾಯಕ ವಿಕ್ರಮ್, ಕಾರ್ತಿ, ತ್ರಿಶಾ ಸೇರಿದಂತೆ ಚಿತ್ರ ತಂಡ ಬೆಂಗಳೂರಿನಲ್ಲಿ ನಿನ್ನೆ ಮಾಧ‍್ಯಮ ಗೋಷ್ಠಿಯಲ್ಲಿ ಪಾಲ್ಗೊಂಡಿದೆ. ಈ ವೇಳೆ ವಿಕ್ರಮ್, ಕಾರ್ತಿ, ತ್ರಿಶಾ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದರು. ಅದರಲ್ಲೂ ವಿಕ್ರಂ ಕನ್ನಡದಲ್ಲೇ ಕಷ್ಟಪಟ್ಟು ಭಾಷಣ ಮಾಡಿದರು. ಇದಕ್ಕೆ ನೆರೆದಿದ್ದವರಿಂದ ಚಪ್ಪಾಳೆಯೂ ಬಂತು. ಈ ಸಿನಿಮಾದಲ್ಲಿ ಅವರು ಕನ್ನಡದಲ್ಲೇ ಡಬ್ ಮಾಡಿದ್ದಾರಂತೆ. ಈ ಕಾರಣಕ್ಕೆ ಸ್ವಲ್ಪ ಸ್ವಲ್ಪ ಕನ್ನಡ ಕಲಿತಿದ್ದೇನೆ ಎಂದಿದ್ದಾರೆ ವಿಕ್ರಂ.

ಇನ್ನು ಪೊನ್ನಿಯನ್ ಸೆಲ್ವನ್ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ನಿನ್ನೆ ಬೆಂಗಳೂರಿನಲ್ಲಿ ಪ್ರಚಾರದ ವೇಳೆ ಚಿತ್ರತಂಡ ದಿವಂಗತ ನಟ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಭಾಸ್-ಕೃತಿ ಡೇಟಿಂಗ್ ರೂಮರ್ಸ್ ಎಲ್ಲಾ ಚೀಪ್ ಗಿಮಿಕ್?!