Publish Date: Sun, 07 Apr 2019 (05:15 IST)
Updated Date: Sun, 07 Apr 2019 (05:17 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ. ಅದೂ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಗರಡಿಯಲ್ಲಿ!
ಅರೇ ಎಲ್ಲಾ ಬಿಟ್ಟು ರಣವೀರ್ ಕ್ರಿಕೆಟ್ ಕಡೆಗೆ ಯಾಕೆ ಹೊರಳಿದ್ರು ಎಂದು ಅಚ್ಚರಿಗೊಳಗಾಬೇಡಿ. ರಣವೀರ್ ಈಗ ಕ್ರಿಕೆಟ್ ತರಬೇತಿ ಪಡೆಯುತ್ತಿರುವುದೂ ಸಿನಿಮಾ ಸಲುವಾಗಿಯೇ.
ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ 1983 ರಲ್ಲಿ ವಿಶ್ವಕಪ್ ಗೆದ್ದಿತ್ತು. ಆ ಸಾಹಸದ ಕತೆಯನ್ನು ಹೊಂದಿರುವ ಸಿನಿಮಾವೊಂದು ನಿರ್ಮಾಣವಾಗುತ್ತಿದ್ದು, ಇದರಲ್ಲಿ ರಣವೀರ್ ನಾಯಕರಾಗಿದ್ದಾರೆ. ಅದೇ ಕಾರಣಕ್ಕೆ ರಣವೀರ್ ಕಪಿಲ್ ಕೈಯಲ್ಲೇ ಕ್ರಿಕೆಟ್ ತರಬೇತಿ ಪಡೆಯುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ