ಇನ್ಮುಂದೆ ಈ ಬಾಲಿವುಡ್ ಸ್ಟಾರ್ ದಂಪತಿಯ ಮಗಳ ಪೋಟೋ ಕ್ಲಿಕ್ಕಿಸುವಂತಿಲ್ಲ

Sampriya
ಗುರುವಾರ, 13 ಮಾರ್ಚ್ 2025 (16:31 IST)
Photo Courtesy X
ಮುಂಬೈ: ಈ ವರ್ಷದ ಆರಂಭದಲ್ಲಿ ಬಾಲಿವುಡ್‌ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದ ದಾಳಿಯ ನಂತರ, ಬಾಲಿವುಡ್ ತಾರಾ ದಂಪತಿಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಗುರುವಾರ ತಮ್ಮ ಮಗಳು ರಾಹಾ ಅವರ ಫೋಟೋಗಳನ್ನು ಕ್ಲಿಕ್ ಮಾಡದಂತೆ ಮಾಧ್ಯಮಗಳಿಗೆ ವಿನಂತಿಸಿದ್ದಾರೆ.

ರಣಬೀರ್, ಆಲಿಯಾ ಮಗಳು ರಾಹಾ ಅವರ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಪಾಪರಾಜಿಗಳನ್ನು ವಿನಂತಿಸಿದ್ದಾರೆ.

ಅಲಿಯಾ ಭಟ್ ಹುಟ್ಟುಹಬ್ಬದ ಕೆಲವು ದಿನಗಳ ಮೊದಲು ಮಾಧ್ಯಮಗಳ ಬಳಿ ತಮ್ಮ ಮಗುವಿನ ಸುರಕ್ಷತೆಗಾಗಿ ಫೋಟೋವನ್ನು ತೆಗೆಯಬೇಡಿ. ಪೋಷಕರಾಗಿ, ನಾವು ನಮ್ಮ ಮಗುವನ್ನು ರಕ್ಷಿಸಲು
ಪ್ರಯತ್ನಿಸುತ್ತಿದ್ದೇವೆ ಮತ್ತು ನಾವು ನಮ್ಮಿಂದ ಸಾಧ್ಯವಾದಷ್ಟು ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ..

ಇಂದು ಪ್ರತಿಯೊಬ್ಬರಲ್ಲೂ ಫೋನ್ ಇದೆ, ಏನ್‌ ಬೇಕಾದರೂ ಪೋಸ್ಟ್ ಮಾಡಬಹುದು, ಮತ್ತು ಅದು ಕಾಡ್ಗಿಚ್ಚಿನಂತೆ ಹರಡಬಹುದು, ಆದ್ದರಿಂದ ಅದು ನಮ್ಮ ನಿಯಂತ್ರಣದಲ್ಲಿಲ್ಲ. ನೀವು ನಮ್ಮ ಕುಟುಂಬದವರಂತೆ, ಆದ್ದರಿಂದ ನಾವು ನಿಮ್ಮನ್ನು ವಿನಂತಿಸುತ್ತಿದ್ದೇವೆ ಎಂದು ಕೇಳಿಕೊಂಡಿದ್ದಾರೆ.

ತಮ್ಮ ವಿನಂತಿಯನ್ನು ಪೂರೈಸದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆಯೇ ಎಂದು ಮಾಧ್ಯಮದವರು ಪ್ರಶ್ನಿಸಿದಾಗ, "ನಾನು ಮುಂಬೈನಲ್ಲಿ ಹುಟ್ಟಿದ್ದೇನೆ ಮತ್ತು ನೀವೆಲ್ಲರೂ ಕುಟುಂಬ; ನಾವು ಕಾನೂನು ಮಾರ್ಗವನ್ನು ತೆಗೆದುಕೊಳ್ಳುತ್ತೇವೆ ಎಂದಲ್ಲ. ನಾವು ನಿಮ್ಮನ್ನು ಕೇಳಿದಾಗ ಅಥವಾ ನಿಮಗೆ ಬೇಕಾದುದನ್ನು ನೀಡಿದಾಗಲೆಲ್ಲಾ, ನಾವು ಪರಸ್ಪರ ನಮ್ಮ ಮಾತನ್ನು ನಡೆಸಿಕೊಡುತ್ತೇವೆ. ಪದೇ ಪದೇ ಉಲ್ಲಂಘನೆ ಆದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ನಿಮಗೆ ಗೌರವ ಬೇಕು ಅಂದ್ರೆ ಬೇರೆಯವರಿಗೂ ಕೊಡೋದನ್ನು ಕಲಿಯಿರಿ: ಅಶ್ವಿನಿಗೆ ಕಿಚ್ಚ ಸುದೀಪ್ ಕ್ಲಾಸ್ video

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments