Select Your Language

Notifications

webdunia
webdunia
webdunia
webdunia

ರಣವೀರ್ ಸಿಂಗ್ ನಗ್ನರಾಗಲು ಪುರುಷ, ಮಹಿಳೆಯರಿಗೆ ಸ್ಪೂರ್ತಿಯಾಗಲಿದ್ದಾರೆ: ರಾಮ್ ಗೋಪಾಲ್ ವರ್ಮಾ

ರಣವೀರ್ ಸಿಂಗ್ ನಗ್ನರಾಗಲು ಪುರುಷ, ಮಹಿಳೆಯರಿಗೆ ಸ್ಪೂರ್ತಿಯಾಗಲಿದ್ದಾರೆ: ರಾಮ್ ಗೋಪಾಲ್ ವರ್ಮಾ
ಮುಂಬೈ , ಬುಧವಾರ, 27 ಜುಲೈ 2022 (10:00 IST)
ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಫೋಟೋ ಶೂಟ್ ಗಾಗಿ ನಗ್ನರಾಗಿದ್ದ ಬಾಲಿವುಡ್ ನಟ ರಣವೀರ್ ಸಿಂಗ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ರಣವೀರ್ ಸಿಂಗ್ ನಗ್ನರಾಗಿದ್ದಕ್ಕೆ ಹಲವರು ಅವರನ್ನು ಟ್ರೋಲ್ ಮಾಡುತ್ತಿದ್ದು, ಮುಂಬೈ ಪೊಲೀಸ್ ಠಾಣೆಯೊಂದರಲ್ಲಿ ದೂರು ಕೂಡಾ ದಾಖಲಾಗಿದೆ. ಇಂತಹ ಸಂದರ್ಭದಲ್ಲಿ ರಾಮ್ ಗೋಪಾಲ್ ವರ್ಮಾ ನಟ ರಣವೀರ್ ಬೆಂಬಲಕ್ಕೆ ನಿಂತಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ‘ಕೆಲವು ಕಪಟ, ನಿರ್ಲಜ್ಜ ಮನಸ್ಥಿತಿಯವರು ಮಾತ್ರ ಈ ಸುಂದರ ಫೋಟೋವನ್ನು ವಿರೋಧಿಸಬಹುದು. ಈ ಫೋಟೋ ವಿರೋಧಿಸಿದವರಿಗೆ ಮರಣ ಸಂಭವಿಸಲಿ ಎಂದು ವಿಶ್ ಮಾಡಿ ಎಂದು ಎಲ್ಲಾ ಪುರುಷ, ಮಹಿಳೆಯರಿಗೆ ಕರೆ ಕೊಡುತ್ತಿದ್ದೇನೆ. ಒಬ್ಬ ಪುರುಷ ಅಥವಾ ಮಹಿಳೆಯನ್ನು ನಗ್ನವಾಗಿ ನೋಡುವುದು ನಮ್ಮ ಹಕ್ಕು ಎಂದು ಎಲ್ಲರೂ ಧ‍್ವನಿಯೆತ್ತಬೇಕು ಎಂದು ಕರೆಕೊಡುತ್ತೇನೆ. ಇದು ಎಷ್ಟೋ ಜನರಿಗೆ ನಗ್ನರಾಗಲು ಸ್ಪೂರ್ತಿಯಾಗಬಹುದು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿ ಭಾಯಿಯನ್ನು ರಕ್ಷಿಸಲಿದ್ದಾರೆ ಸಲಾರ್ ಪ್ರಭಾಸ್!