Publish Date: Thu, 30 Aug 2018 (11:01 IST)
Updated Date: Thu, 30 Aug 2018 (11:03 IST)
ಮುಂಬೈ : ಇತ್ತೀಚೆಗಷ್ಟೇ ಹಾಲಿವುಡ್ ನಲ್ಲಿ ನಟಿಸುವ ಸಲುವಾಗಿ ನಟಿ ಪ್ರಿಯಾಂಕ ಚೋಪ್ರಾ ಸಲ್ಮಾನ್ ಖಾನ್ ನಟಿಸುತ್ತಿರುವ ‘ಭರತ್’ ಚಿತ್ರದಿಂದ ಹೊರಬಂದಿದ್ದರು. ಇದರಿಂದ ಪ್ರಿಯಾಂಕ ಇನ್ನು ಬಾಲಿವುಡ್ ಗೆ ಗುಡ್ ಬೈ ಹೇಳಿ ಹಾಲಿವುಡ್ ಗೆ ಹಾರಲಿದ್ದಾರೆ ಎಂದು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಇದೀಗ ನಟಿ ಪ್ರಿಯಾಂಕ ಚೋಪ್ರಾ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ಅದೇನೆಂದರೆ ನಟಿ ಪ್ರಿಯಾಂಕ ಚೋಪ್ರಾ ನಿಕ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮೇಲೆ ಇದೀಗ ಮತ್ತೆ ಬಾಲಿವುಡ್ ನ ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರಂತೆ. ವಿಲಿಯಂ ಶೇಕ್ಸ್ಪಿಯರ್ ಕಥಾ ಆಧಾರಿತ ಚಿತ್ರ ಇದಾಗಿದ್ದು ವಿಶಾಲ್ ಭಾರದ್ವಾಜ್ ನಿರ್ದೇಶನ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರೇ 'ಪತಾಕಾ' ಚಿತ್ರದ ಹಾಡು ಬಿಡುಗಡೆಯ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
‘ನಟಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಚಿತ್ರದ ಬಗ್ಗೆ ಈಗಾಗಲೇ ಮಾತುಕತೆ ನಡೆದಿದೆ. ಅವರು ಸಹ ಒಪ್ಪಿಕೊಂಡಿದ್ದಾರೆ. ಮುಂದಿನ ವರ್ಷ ಈ ಚಿತ್ರ ತೆರೆಗೆ ಬರಲಿದೆ’ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.