ಮುಂಬೈ: ಪುಷ್ಪ 2: ದಿ ರೂಲ್' ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಮತ್ತೆ ಒಂದಾಗುವ ನಿರೀಕ್ಷೆಯಿದೆ, ಆದರೆ ಈ ಬಾರಿ ಸಂಪೂರ್ಣವಾಗಿ ವಿಭಿನ್ನ ಅವತಾರಗಳಲ್ಲಿ.
ತಾತ್ಕಾಲಿಕವಾಗಿ AA22xA6 ಎಂದು ಹೆಸರಿಸಲಾದ ನಿರ್ದೇಶಕ ಅಟ್ಲೀ ಅವರ ಮಹತ್ವಾಕಾಂಕ್ಷೆಯ ಬಿಗ್ ಬಜೆಟ್ ಸಿನಿಮಾಗೆ ಇದೀಗ ರಶ್ಮಿಕಾ ಅವರೇ ನಾಯಕಿ ಎಂದು ಪಕ್ಕಾ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಮಾತ್ರ ಸ್ಪಷ್ಟನೆಯನ್ನು ನೀಡಿಲ್ಲ.
ಈ ಜೋಡಿಯ ಈ ಹಿಂದಿನ ಪುಪ್ಪಾ ಸಿನಿಮಾ ತೆರೆಮೇಲೆ ಹೊಸ ಕಮಾಲ್ ಮಾಡಿತ್ತು. ಇದೀಗ ಈ ಸಿನಿಮಾದಲ್ಲಿ ಮಾತ್ರ ವಿಭಿನ್ನ ಮಾತ್ರದ ಮೂಲಕ ಮನರಂಜನೆ ನೀಡಲಿದ್ದಾರೆ.
ಈ ಚಿತ್ರದಲ್ಲಿ ರಶ್ಮಿಕಾ ಅವರ ಪಾತ್ರವು ಅವರ ವೃತ್ತಿಜೀವನದ ಅತ್ಯಂತ ಧೈರ್ಯಶಾಲಿ ಮತ್ತು ಪ್ರಯೋಗಾತ್ಮಕವಾಗಿದೆ ಎಂದು ಹೇಳಲಾಗಿದೆ.