ಮುಂಬೈ: ಬಾಲಿವುಡ್ ನ ಮಾದಕ ನಟಿ ಮಲ್ಲಿಕಾ ಶೆರಾವತ್  ರನ್ನು ಅವರ ಪ್ಯಾರಿಸ್ ನಲ್ಲಿರುವ ಫ್ಲ್ಯಾಟ್ ನಿಂದ ಹೊರ ಹಾಕಲಾಗಿದೆ ಎಂಬ ಸುದ್ದಿ ಓಡಾಡುತ್ತಿತ್ತು. ಇದಕ್ಕೆ ಸ್ವತಃ ನಟಿ ಮಲ್ಲಿಕಾ ಪ್ರತಿಕ್ರಿಯಿಸಿದ್ದಾರೆ.
 
ಮಲ್ಲಿಕಾ ಮತ್ತು ಆಕೆಯ ಫ್ರೆಂಚ್ ಮೂಲದ ಪತಿ ಪ್ಯಾರಿಸ್ ನಲ್ಲಿರುವ ಫ್ಲ್ಯಾಟ್ ಮಾಲಿಕರಿಗೆ ಬಾಡಿಗೆ ನೀಡದೇ ವಂಚಿಸಿದ್ದರು. ಇದಕ್ಕೆ ಅವರಿಬ್ಬರನ್ನು ಹೊರಹಾಕಲಾಗಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿತ್ತು.
									
						                     
							
							
			        							
								
																	ಇದಕ್ಕೆ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿರುವ ಮಲ್ಲಿಕಾ ಪ್ಯಾರಿಸ್ ನಲ್ಲಿ ನಮಗೆ ಫ್ಲ್ಯಾಟ್ ಇಲ್ಲವೇ ಇಲ್ಲ ಎಂದಿದ್ದಾರೆ. ‘ದಯವಿಟ್ಟು ಈ ಸುದ್ದಿ ಪ್ರಸಾರ ಮಾಡಿದ ಮಾಧ್ಯಮ ಪ್ಯಾರಿಸ್ ನಲ್ಲಿ ನಾವಿರುವ ಫ್ಲ್ಯಾಟ್ ವಿಳಾಸ ಎಲ್ಲಿದೆಯೆಂದು ಹೇಳಲಿ. ನಾನು ಪ್ಯಾರಿಸ್ ನಲ್ಲಿ ನೆಲೆಸುತ್ತಲೇ ಇಲ್ಲ. ನನಗೆ ಅಲ್ಲಿ ಫ್ಲ್ಯಾಟ್ ಕೂಡಾ ಇಲ್ಲ. ನಾನು ಮುಂಬೈಯಲ್ಲೇ ಇದ್ದೇನೆ. ಹೀಗಿರುವಾಗ ಅನಗತ್ಯವಾಗಿ ನನ್ನ ಹೆಸರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿರುವುದು ಏಕೆ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
									
										
								
																	ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ 
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ