ಸಹ ಕ್ರಿಕೆಟಿಗರ ಸಹಾಯ ಕೇಳಿದ ‘ಜಸ್ಟ್ ಮ್ಯಾರೀಡ್’ ಕೊಹ್ಲಿ!

ಶುಕ್ರವಾರ, 15 ಡಿಸೆಂಬರ್ 2017 (10:45 IST)
ನವದೆಹಲಿ: ಮೊನ್ನೆಯಷ್ಟೇ ಇಟೆಲಿಯಲ್ಲಿ ಬಹುಕಾಲದ ಗೆಳತಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ ತಂಡದ ಸಹವರ್ತಿಗಳಿಗೆ ಸಹಾಯ ಮಾಡುವಂತೆ ಮೊರೆ ಇಟ್ಟಿದ್ದಾರೆ!
 

ವಿವಾಹಕ್ಕೆ ಶುಭ ಕೋರಿದ ಸಹ ಕ್ರಿಕೆಟಿಗರಿಗೆಲ್ಲಾ ಧನ್ಯವಾದ ತಿಳಿಸಿದ ಕೊಹ್ಲಿ ಅಜಿಂಕ್ಯಾ ರೆಹಾನೆ ಬಳಿ ಸಹಾಯ ಕೇಳಿದ್ದಾರೆ. ರೆಹಾನೆ, ಶುಭಾಷಯ ಹೇಳುತ್ತಾ ವಿವಾಹಿತರ ಕ್ಲಬ್ ಗೆ ಸ್ವಾಗತ ಎಂದಿದ್ದರು.

ಇದಕ್ಕೆ ಧನ್ಯವಾದ ಸಲ್ಲಿಸಿದ ಕೊಹ್ಲಿ ಥ್ಯಾಂಕ್ಯೂ ಎನ್ನುತ್ತಾ ಕೆಲವು ಟಿಪ್ಸ್ ಕೊಡು ಎಂದು ಕಾಲೆಳೆದಿದ್ದಾರೆ. ಅಷ್ಟೇ ಅಲ್ಲದೆ, ತಂಡದ ಸಹವರ್ತಿಗಳಿಗೆ ಧನ್ಯವಾದ ಸಲ್ಲಿಸುತ್ತಾ ಸದ್ಯದಲ್ಲೇ ನಿಮ್ಮನ್ನು ಭೇಟಿಯಾಗುತ್ತೇನೆಂದಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಶುಭ ಕೋರಿದ ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿಗೂ ಧನ್ಯವಾದ ಸಲ್ಲಿಸಲು ಕೊಹ್ಲಿ ಮರೆತಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮ್ಯಾಚ್ ಫಿಕ್ಸ್ ಆಗಿದೆ ಎಂಬ ಟ್ವೀಟ್ ಲೈಕ್ ಮಾಡಿದ ಧೋನಿ!