Publish Date: Fri, 15 Dec 2017 (08:42 IST)
Updated Date: Fri, 15 Dec 2017 (08:44 IST)
ಮುಂಬೈ: ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿ ವಿವಾಹದ ನೆಪದಲ್ಲಿ ಸದ್ಯಕ್ಕೆ ಬಿಡುವು ಪಡೆದಿದ್ದಾರೆ. ಆದರೆ ಹಂಗಾಮಿ ನಾಯಕ ರೋಹಿತ್ ಶರ್ಮಾ ಕೊಹ್ಲಿಯ ಜಾತಕ ಬಯಲು ಮಾಡುತ್ತೇನೆ ಎಂದಿದ್ದಾರೆ!
ಹಾಗಂತ ರೋಹಿತ್ ಹೇಳಿದ್ದು ತಮಾಷೆಗೆ. ಅದೂ ಕೊಹ್ಲಿಯ ಜಾತಕ ಬಯಲು ಮಾಡುತ್ತೇನೆಂದಿದ್ದು ಅನುಷ್ಕಾ ಬಳಿ. ವಿರಾಟ್ ಮತ್ತು ಅನುಷ್ಕಾ ವಿವಾಹಕ್ಕೆ ಶುಭಕೋರಿದ ರೋಹಿತ್, ಇರು ಗಂಡನ ಹ್ಯಾಂಡ್ ಬುಕ್ ನೀಡುತ್ತೇನೆಂದು ಕಾಲೆಳೆದಿದ್ದಾರೆ. ಇದಕ್ಕೆ ಅನುಷ್ಕಾ ಕೂಡಾ ನಗುತ್ತಲೇ ಪ್ರತಿಕ್ರಿಯಿಸಿದ್ದು, ದ್ವಿಶತಕ ಸಿಡಿಸಿದ್ದಕ್ಕೂ ಶುಭ ಹಾರೈಸಿದ್ದಾರೆ.
ತಮಗೆ ಶುಭ ಹಾರೈಸಿದವರಿಗೆಲ್ಲಾ ಟ್ವಿಟರ್ ನಲ್ಲಿ ಧನ್ಯವಾದ ಸಲ್ಲಿಸಿದ್ದಾರೆ ಅನುಷ್ಕಾ. ಬಾಲಿವುಡ್ ನಟ ರಿತೇಶ್ ದೇಶ್ ಮುಖ್ ಕೂಡಾ ಶುಭ ಹಾರೈಸುವ ನೆಪದಲ್ಲಿ ಅನುಷ್ಕಾ ಕಾಲೆಳೆದಿದ್ದಾರೆ. ಇನ್ನು ವಿರಾಟ್ ವೈಸ್ ಕ್ಯಾಪ್ಟನ್, ಅನುಷ್ಕಾ ಕ್ಯಾಪ್ಟನ್, ಶುಭವಾಗಲಿ ಎಂದು ತಮಾಷೆ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ