Select Your Language

Notifications

webdunia
webdunia
webdunia
webdunia

ನಟ ಕಮಲ್ ಹಾಸನ್ ಗೆ ನೋಟಿಸ್ ಜಾರಿ ಮಾಡಿದ ಮದ್ರಾಸ್ ಹೈಕೋರ್ಟ್

ನಟ ಕಮಲ್ ಹಾಸನ್ ಗೆ ನೋಟಿಸ್ ಜಾರಿ ಮಾಡಿದ ಮದ್ರಾಸ್ ಹೈಕೋರ್ಟ್
ಚೆನ್ನೈ , ಸೋಮವಾರ, 6 ಆಗಸ್ಟ್ 2018 (07:49 IST)
ಚೆನ್ನೈ : ಒಂದು ಸಿನಿಮಾವನ್ನು ಒಪ್ಪಿಕೊಂಡು ಬೇರೆ ಸಿನಿಮಾದಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ನಟ ಕಮಲ್ ಹಾಸನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.


ಹೌದು. ಪಿರಾಮಿಡ್ ಸಾಯ್ಮಿರಾ ಚಿತ್ರ ನಿರ್ಮಾಣ ಸಂಸ್ಥೆ, ಕಮಲ್ ಹಾಸನ್  ತಮಗೆ 7.75 ಕೋಟಿ ರೂಪಾಯಿ ಹಣ ಕೊಡಬೇಕು ಅಂತ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಇದರ ವಿಚಾರಣೆ ನಡೆಸಿದ ಕೋರ್ಟ್, ಆಗಸ್ಟ್ 6ರೊಳಗೆ ಉತ್ತರಿಸುವಂತೆ ನೋಟಿಸ್ ನೀಡಿದೆ.


ಪಿರಾಮಿಡ್ ಸಾಯ್ಮಿರಾ ಚಿತ್ರ ನಿರ್ಮಾಣ ಸಂಸ್ಥೆ ಮರ್ಮಯೋಗಿ ಅನ್ನೋ ಚಿತ್ರದ ನಿರ್ಮಾಣಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಇದ್ರಲ್ಲಿ ಕಮಲ್ ಲೀಡ್ ರೋಲ್​ನಲ್ಲಿ ನಟಿಸುವುದರ ಜೊತೆಗೆ ಕಥೆ, ಸ್ಕ್ರೀನ್ ಪ್ಲೇ ಹಾಗೂ ಡೈಲಾಗ್ ಬರೆಯುವುದಕ್ಕೂ ಒಪ್ಪಿಕೊಂಡಿದ್ದರಂತೆ. ಇದಕ್ಕಾಗಿ ಅವರಿಗೆ ಎರಡು ಕಂತುಗಳಲ್ಲಿ 10.9 ಕೋಟಿ ರೂಪಾಯಿ ಹಣವನ್ನೂ ನೀಡಿದ್ದಾರಂತೆ. ಆದರೆ , ಅವರು ಆ ಹಣವನ್ನ ಮತ್ತೊಂದು ಚಿತ್ರದ ನಿರ್ಮಾಣದಲ್ಲಿ ತೊಡಗಿಸಿದ್ದಾರೆ ಅಂತ ಸಂಸ್ಥೆ ಆರೋಪಿಸಿದೆ. ಹಾಗಾಗಿ ನಟ ಕಮಲ್ ಹಾಸನ್ ಅವರಿಗೆ ಮದ್ರಾಸ್ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಕಾಲಾ ಚಿತ್ರಕ್ಕೆ ಎದುರಾದ ಸಂಕಷ್ಟ ವಿಶ್ವ ರೂಪಂ -2 ಚಿತ್ರಕ್ಕೂ ಎದುರಾಗಲಿದೆಯಾ?