Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಡುವೆ ಇರುವುದು ಸ್ನೇಹನಾ, ಪ್ರೀತಿನಾ ಎನ್ನುದಕ್ಕೆ ಇಲ್ಲಿದೆ ನೋಡಿ ಉತ್ತರ!

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಡುವೆ ಇರುವುದು ಸ್ನೇಹನಾ, ಪ್ರೀತಿನಾ ಎನ್ನುದಕ್ಕೆ ಇಲ್ಲಿದೆ ನೋಡಿ ಉತ್ತರ!
ಮುಂಬೈ , ಬುಧವಾರ, 28 ಮಾರ್ಚ್ 2018 (07:02 IST)
ಮುಂಬೈ : ಬಾಲಿವುಡ್ ನ ಸ್ಟಾರ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರು ಮಾಜಿ ಪ್ರೇಮಿಗಳಾಗಿದ್ದರು. ಇವರಿಬ್ಬರು ತಮ್ಮ ಪ್ರೀತಿ-ಪ್ರೇಮಕ್ಕೆ ಎಳ್ಳುನೀರು ಬಿಟ್ಟು ಸದ್ಯಕ್ಕೆ ಒಳ್ಳೆಯ ಸ್ನೇಹಿತರಾಗಿರುವುದು ಎಲ್ಲರಿಗೂ ತಿಳಿದ ವಿಷಯ.


'ಟೈಗರ್ ಜಿಂದಾ ಹೈ ' ಚಿತ್ರದಲ್ಲಿ ಇವರಿಬ್ಬರು ಜೋಡಿಯಾಗಿ ನಟಿಸಿದ್ದು, ಚಿತ್ರ ಸೂಪರ್ ಹಿಟ್ ಆದ ಕಾರಣ ಅವರಿಬ್ಬರ ನಡುವಿನ ಸ್ನೇಹ ಸಂಬಂಧ ಮತ್ತಷ್ಟು ಗಟ್ಟಿಯಾಗಿತ್ತು. ಆದರೆ ಇದೀಗ ಅವರಿಬ್ಬರು  ಒಂದೇ ಕಪ್ ನಲ್ಲಿ ಕಾಫಿ ಕುಡಿಯುವುದರ ಮೂಲಕ ಮತ್ತೆ ಅವರಿಬ್ಬರ ಸಂಬಂಧದ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ.


ಇತ್ತೀಚಿಗೆ ಪುಣೆಯಲ್ಲಿ Da-Bangg ಟೂರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅವರು ಪಾಲ್ಗೊಂಡಿದ್ದು , ಆವೇಳೆ ಸಲ್ಮಾನ್‌ ಖಾನ್‌ ಮಗ್‌ನಲ್ಲಿದ್ದ ಕಾಫಿ ಕುಡಿದು , ಪಕ್ಕದಲ್ಲಿಯೇ ಕುಳಿತಿದ್ದ ಕತ್ರಿನಾ ಅವರಿಗೆ  ನೀಡಿದ್ರು . ಅದನ್ನು ನಗುತ್ತಲೇ ಸ್ವೀಕರಿಸಿದ ಕತ್ರಿನಾ ಕೈಫ್ ಅವರು ಕಾಫಿ ಹೀರಿ ಮತ್ತೆ ವಾಪಸ್‌ ನೀಡಿದ್ರು . ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೊನೆಗೂ ತಾವು ಪ್ರೀತಿಸುತ್ತಿರುವ ಹುಡುಗನ ಬಗ್ಗೆ ಬಾಯ್ಬಿಟ್ಟ ‘ಯು ಟರ್ನ್’ ಚಿತ್ರದ ಬೆಡಗಿ ಶ್ರದ್ದಾ ಶ್ರೀನಾಥ್ !