Publish Date: Wed, 21 Mar 2018 (06:16 IST)
Updated Date: Wed, 21 Mar 2018 (06:19 IST)
ಮುಂಬೈ : 1995ರಲ್ಲಿ ಬಿಡುಗಡೆಯಾದ ‘ವೀರ್ ಗತಿ’ ಚಿತ್ರದಲ್ಲಿ ಸಲ್ಮಾನ್ ಖಾನ್ ಅವರಿಗೆ ಜೋಡಿಯಾಗಿ ನಟಿಸಿದ ಬಾಲಿವುಡ್ ನಟಿ ಪೂಜಾ ದದ್ವಾಲ್ ಅವರು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಈಗ ನಟ ಸಲ್ಮಾನ್ ಖಾನ್ ಅವರಲ್ಲಿ ಸಹಾಯಹಸ್ತ ಕೇಳುತ್ತಿದ್ದಾರೆ.
ನಟಿ ಪೂಜಾ ದದ್ವಾಲ್ ಅವರು ಟಿಬಿ ಹಾಗೂ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, 15 ದಿನಗಳಿಂದ ಮುಂಬೈನ ಟಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಆರೋಗ್ಯ ಹದಗೆಡುತ್ತಿದ್ದಂತೆ ಪತಿ ಹಾಗೂ ಆತನ ಮನೆಯವರು ಅವರನ್ನು ದೂರ ಮಾಡಿದ್ದಾರೆ. ಇದರಿಂದಾಗಿ ಅವರಿಗೆ ಚಿಕಿತ್ಸೆಗೆ ಹಣವಿಲ್ಲದೆ ತೊಂದರೆಗೆ ಒಳಗಾಗಿದ್ದಾರೆ.
ಆದ ಕಾರಣ ಸಹಾಯ ಮಾಡುವಂತೆ ನಟ ಸಲ್ಮಾನ್ ಖಾನ್ ರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಕಾಯಿಲೆಯ ವಿಷಯ ತಿಳಿದಾಗಿನಿಂದ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದ್ರೆ ಸಾಧ್ಯವಾಗಿಲ್ಲ. ತನಗೆ ಸಹಾಯ ಮಾಡುವಂತೆ ವಿಡಿಯೋ ಒಂದನ್ನು ಕೂಡ ಕಳುಹಿಸಿರುವುದಾಗಿ ತಿಳಿಸಿದ್ದಾರೆ. ಆದರೆ ಇಲ್ಲಿಯ ತನಕ ಸಲ್ಮಾನ್ ಖಾನ್ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ