Select Your Language

Notifications

webdunia
webdunia
webdunia
webdunia

ತೆಲುಗು ಚಿತ್ರದಲ್ಲಿ ಅಲೆ ಎಬ್ಬಿಸುತ್ತಾರಾ ಕಿಯಾರಾ...!!!!

ತೆಲುಗು ಚಿತ್ರದಲ್ಲಿ ಅಲೆ ಎಬ್ಬಿಸುತ್ತಾರಾ ಕಿಯಾರಾ...!!!!

ನಾಗಶ್ರೀ ಭಟ್

ಬೆಂಗಳೂರು , ಗುರುವಾರ, 22 ಫೆಬ್ರವರಿ 2018 (16:10 IST)
ಬಾಲಿವೂಡ್ ಬೆಡಗಿ ಕಿಯಾರಾ ತನ್ನ ಇತ್ತೀಚಿನ ಚಿತ್ರವಾದ ಎಮ್‌ಎಸ್ ಧೋನಿ ಚಿತ್ರದಲ್ಲಿ ತನ್ನ ಮೋಹಕ ನಟನೆಯಿಂದ ಪ್ರೇಕ್ಷಕರನ್ನು ಮೋಡಿಗೊಳಿಸಿದ್ದು, ಇದೀಗ ದಕ್ಷಿಣ ಭಾರತದ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ಇಗಾಗಲೇ ಮಶಿನ್, ಫಗ್ಲಿ, ಎಮ್‌ಎಸ್ ಧೋನಿ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕಿಯಾರಾ ಕೋರತಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ತೆಲುಗು ಚಿತ್ರದಲ್ಲಿ ಬಣ್ಣ ಹಚ್ಚಿದ್ದು ಚಿತ್ರದ ಕುರಿತಂತೆ ಮನಬಿಚ್ಚಿ ಮಾತನಾಡಿದ್ದಾರೆ. 
ಕಿಯಾರಾ ಮೊದಲ ಬಾರಿಗೆ ತೆಲುಗು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ತನ್ನ ಮೊದಲ ಚಿತ್ರ ಬಿಡುಗಡೆ ಆದ ಸಂದರ್ಭದಲ್ಲಿ ನನಗೆ ದಕ್ಷಿಣ ಭಾರತದ ಚಿತ್ರರಂಗದಿಂದ ಹಲವು ಆಫರ್‌ಗಳು ಬಂದಿದ್ದವು, ಆ ಸಮಯದಲ್ಲಿ ನಾನು ಚಿತ್ರವನ್ನು ಮಾಡಲು ಸಿದ್ಧವಿರಲಿಲ್ಲ. ಮಹೇಶ ಬಾಬು ಪತ್ನಿಯಾದ ನಮೃತಾ ಶಿರೋಡ್ಕರ್ ನನ್ನ ಸಂಪರ್ಕದಲ್ಲಿರುವ ಕಾರಣಕ್ಕೆ ನಾನು ಈ ಚಿತ್ರವನ್ನು ಮಾಡಲು ಒಪ್ಪಿಕೊಂಡೆ ಎನ್ನುವ ಮಾತನ್ನು ಹೇಳಿದರು.
 
ತನ್ನ ಮೊದಲ ಚಿತ್ರವಾದ 'ಭರತ್ ಅನಿ ನೇನು' ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ಅಲ್ಲದೇ ದಕ್ಷಿಣ ಭಾರತದ ಸುಪರ್ ಸ್ಟಾರ್ ಮಹೇಶ್ ಬಾಬು ಜೊತೆ ಪರದೆ ಹಂಚಿಕೊಳ್ಳುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ ಎಂಬುದಾಗಿ ತಿಳಿಸಿದರು. ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಮಾಡುತ್ತಿರುವುದು ಇದೇ ಮೊದಲ ಬಾರಿಗೆ ಆಗಿರುವುದರಿಂದ ಭಾಷೆಯ ತೊಂದರೆ ಉಂಟಾಗಿದೆ ಮುಂದಿನ ದಿನಗಳಲ್ಲಿ ತೆಲುಗು ಭಾಷೆಯನ್ನು ಕಲಿತು ತನ್ನ ಪಾತ್ರಕ್ಕೆ ತಾನೇ ಡಬ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದರು.
webdunia
ಅಷ್ಟೇ ಅಲ್ಲ ತಮ್ಮ ಸಹ ನಟನಾದ ಮಹೇಶ ಬಾಬು ಕುರಿತು ಮಾತನಾಡಿದ ಕಿಯಾರಾ ದಕ್ಷಿಣ ಭಾರತದ ಚಿತ್ರರಂಗದಲ್ಲಿ, ಅದರಲ್ಲೂ ತೆಲುಗು ಚಿತ್ರರಂಗದಲ್ಲಿ ಮಹೇಶ್ ಬಾಬು ಒಬ್ಬ ಉತ್ತಮ ನಟರಾಗಿ ಹೆಸರನ್ನು ಮಾಡಿದ್ದಾರೆ. ಅವರೊಬ್ಬ ಸರಳ ವ್ಯಕ್ತಿಯಾಗಿದ್ದು ಯಾವಾಗಲು ಶಾಂತವಾಗಿರುತ್ತಾರೆ. ಅಲ್ಲದೇ ಪ್ರತಿ ಚಿತ್ರದ ಶಾಟ್ ಅನ್ನು ಪರಿಶೀಲಿಸುತ್ತಾರೆ. ಚಿತ್ರದ ಸೆಟ್‌ನಲ್ಲಿ ತಾವೊಬ್ಬ ಸುಪರ್ ಸ್ಟಾರ್ ಎನ್ನುವ ಮನೋಭಾವನೆಯನ್ನು ಯಾವುತ್ತೀಗೂ ತೋರ್ಪಡಿಸಿಕೊಳ್ಳುವುದಿಲ್ಲ ಎನ್ನುವ ಮಾತನ್ನು ಹೇಳಿದರು. ಅಷ್ಟೇ ಅಲ್ಲ ಅವರು ಎಲ್ಲಾ ತೆಲುಗು ಸಿನೇಮಾವನ್ನು ವೀಕ್ಷಿಸುತ್ತಾರೆ ಮತ್ತು ಪ್ರತಿಬಾರಿ ತಾನು ಶುಟಿಂಗ್‌ಗೆ ಹೈದರಾಬಾದ್‌ಗೆ ಬಂದಾಗ ಯಾವ ಹೊಸ ತೆಲುಗು ಸಿನೇಮಾ ನೋಡಿದ್ದೀರಿ ಎಂದು ಪ್ರಶ್ನೆ ಮಾಡುತ್ತಾರೆ. ಅವರು ತಮ್ಮ ಚಿತ್ರಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತಾರೆ ಅದೇ ಅವರಲ್ಲಿ ಇಷ್ಟವಾಗುವ ಗುಣ ಎಂದು ಮಹೇಶ್ ಅವರ ಸರಳ ವ್ಯಕ್ತಿತ್ವವನ್ನು ಹೊಗಳಿದರು.
 
ಅಂದ ಹಾಗೆ ಹಿಂದಿ ಸೂಪರ್ ಹಿಟ್ ಚಿತ್ರವಾದ ಎಮ್‌ಎಸ್ ಧೋನಿ ಚಿತ್ರದಲ್ಲಿನ ಕಿಯಾರಾ ನಟನೆಯನ್ನು ನೋಡಿ ಮೆಚ್ಚಿಕೊಂಡ ನಿರ್ದೇಶಕ ಶಿವ ಅವರನ್ನೇ ನಾಯಕಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಹಲವು ಬಾಲಿವುಡ್ ಬೆಡಗಿಯರು ದಕ್ಷಿಣ ಭಾರತದ ಚಿತ್ರಗಳಲ್ಲಿ ಅಭಿನಯಿಸಿದ್ದು ಈಗ ಕಿಯಾರಾ ಸರದಿಯಾಗಿದೆ ಎನ್ನಬಹುದು. 'ಭರತ್ ಅನಿ ನೇನು' ಚಿತ್ರದ ಮೂಲಕ ಸೌತ್ ಇಂಡಿಯಾ ಫಿಲ್ಮ್‌ಗೆ ಕಾಲಿರಿಸಿದ್ದು ಬಾಲಿವೂಡ್ ಬ್ಯೂಟಿ ತೆಲುಗು ಚಿತ್ರರಂಗದಲ್ಲಿ ತಮ್ಮ ಹೊಸ ಅಲೆಯನ್ನು ಎಬ್ಬಿಸುತ್ತಾರಾ ಎನ್ನುವುದೇ ಅಭಿಮಾನಿಗಳ ಮುಂದಿರುವ ಕೂತುಹಲವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಣಿ ಮುಖರ್ಜಿ ಆಕಸ್ಮಿಕವಾಗಿ ಆ್ಯಕ್ಟರ್ ಆಗಿದ್ದಾರಂತೆ..!