Select Your Language

Notifications

webdunia
webdunia
webdunia
webdunia

ಬಾಹುಬಲಿ-2 ಚಿತ್ರ ವೀಕ್ಷಿಸದ ಉದ್ಯೋಗಿಯನ್ನು ವಜಾಗೊಳಿಸಿದ ಕಂಪೆನಿ

ಬಾಹುಬಲಿ-2 ಚಿತ್ರ ವೀಕ್ಷಿಸದ ಉದ್ಯೋಗಿಯನ್ನು ವಜಾಗೊಳಿಸಿದ ಕಂಪೆನಿ
ಹೈದ್ರಾಬಾದ್ , ಗುರುವಾರ, 4 ಮೇ 2017 (15:43 IST)
ಬಹುನಿರೀಕ್ಷಿತ ಬಾಹುಬಲಿ-2 ಚಿತ್ರ ಬಿಡುಗಡೆಯಾಗಿ ಆರು ದಿನಗಳು ಕಳೆದರೂ ಚಿತ್ರವನ್ನು ವೀಕ್ಷಿಸದಿದ್ದರಿಂದ 29 ವರ್ಷ ವಯಸ್ಸಿನ ಉದ್ಯೋಗಿ ಮಹೇಶ್ ಬಾಬುನನ್ನು ಕಂಪೆನಿ ವಜಾಗೊಳಿಸಿದ ವಿಚಿತ್ರ ಘಟನೆ ವರದಿಯಾಗಿದೆ.  
 
ಉದ್ಯೋಗಿ ಮಹೇಶ್ ಬಾಬುಗೆ ಬಾಹುಬಲಿ-2 ಚಿತ್ರ ಯಾಕೆ ವೀಕ್ಷಿಸಲಿಲ್ಲ ಎನ್ನುವುದಕ್ಕೆ ಕಾರಣ ನೀಡಿ ಎಂದು ಕಂಪೆನಿ ನೋಟಿಸ್ ಜಾರಿ ಮಾಡಿತ್ತು. ನಂತರ ಉದ್ಯೋಗಿಯಿಂದ ತೃಪ್ತಿಕರ ವಿವರಣೆ ಬಾರದಿರುವುದರಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.   
 
ಬಾಹುಬಲಿ-2 ಚಿತ್ರ ವೀಕ್ಷಣೆಗಾಗಿ ಕಂಪೆನಿಯಿಂದ ಒಂದು ದಿನದ ರಜೆ ನೀಡಲಾಗಿತ್ತು. ಆತನ ಡೆಸ್ಕ್ ಪಕ್ಕದಲ್ಲಿ ಬಾಹುಬಲಿ ಚಿತ್ರದ ಪೋಸ್ಟರ್‌ಗಳನ್ನು ಹಾಕಲಾಗಿದ್ದರೂ ಮಹೇಶ್ ಬಾಬು ಚಿತ್ರ ವೀಕ್ಷಿಸಲು ತೆರಳಲಿಲ್ಲ ಎಂದು ಮಹೇಶ್ ಬಾಬು ಸಹದ್ಯೋಗಿಯೊಬ್ಬರು ತಿಳಿಸಿದ್ದಾರೆ.  
 
ಬಾಹುಬಲಿ-2 ಚಿತ್ರ ವೀಕ್ಷಿಸುವಂತೆ ಹಲವಾರು ಬಾರಿ ಒತ್ತಡ ಹೇರಿದಾಗ, ಚಿತ್ರ ವೀಕ್ಷಿಸುವುದರಿಂದ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆಯೇ ಎಂದು ಮಹೇಶ್ ಬಾಬು ಕೋಪದಿಂದ ಪ್ರಶ್ನಿಸಿದ್ದರಿಂದ, ಆತನನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಹೊಸ ಅವತಾರ ನೋಡಬೇಕೇ?