ಗತ್ತು ತೋರಿಸಿದ್ದಕ್ಕೆ ಟ್ರೋಲ್ ಆದ ಜಯಾ ಬಚ್ಚನ್

Krishnaveni K
ಬುಧವಾರ, 17 ಜನವರಿ 2024 (10:02 IST)
ಮುಂಬೈ: ಅಮಿತಾಭ್ ಬಚ್ಚನ್ ಪತ್ನಿ, ನಟಿ ಜಯಾ ಬಚ್ಚನ್ ಆಗಾಗ ಪಪ್ಪಾರಾಜಿಗಳೊಂದಿಗಿನ ಕಿತ್ತಾಟದಿಂದ ಸುದ್ದಿಯಾಗುತ್ತಲೇ ಇರುತ್ತಾರೆ.

ಇದೀಗ ಪಪ್ಪಾರಾಜಿಗಳ ಮುಂದೆ ಗತ್ತು ತೋರಿಸಲು ಹೋಗಿ ಜಯಾ ಇನ್ನಿಲ್ಲದಂತೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ನಯವಂತಿಕೆ ಏನು ಎಂದು ರೇಖಾ ಅವರನ್ನು ನೋಡಿ ಕಲಿಯಿರಿ ಎಂದು ನೆಟ್ಟಿಗರು ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದು ನಡೆದಿರುವುದು ಅಮೀರ್ ಖಾನ್ ಪುತ್ರಿ ಇರಾ ಖಾನ್ ವಿವಾಹ ಆರತಕ್ಷತೆಯಲ್ಲಿ. ಬಾಲಿವುಡ್ ಸ್ನೇಹಿತರಿಗಾಗಿ ಅಮೀರ್ ಕುಟುಂಬ ಅದ್ಧೂರಿ ರಿಸೆಪ್ಷನ್ ಏರ್ಪಡಿಸಿತ್ತು. ಈ ಕಾರ್ಯಕ್ರಮಕ್ಕೆ ಪುತ್ರಿ ಶ್ವೇತಾ ಜೊತೆ ಜಯಾ ಬಂದಿದ್ದರು. ಜಯಾರನ್ನು ನೋಡಿದ ಪಪ್ಪಾರಾಜಿಗಳು ಫೋಟೋಗೆ ಪೋಸ್ ಕೊಡಲು ಹೇಳಿದ್ದಾರೆ.

ತಮಗೆ ಬೇಕಾದ ಆಂಗಲ್ ನಲ್ಲಿ ನಿಲ್ಲಲು ಕ್ಯಾಮರಾ ಮ್ಯಾನ್ ಗಳು ಹೇಳುವುದು ಸಾಮಾನ್ಯ. ಅದರಂತೆ ಪಪ್ಪಾರಾಜಿಗಳು ಪೋಸ್ ಕೊಡಲು ನಿರ್ದೇಶನ ನೀಡಿದಾಗ ಜಯಾ ‘ನನಗೇ ಪೋಸ್ ಕೊಡಲು ಕಲಿಸುತ್ತಿದ್ದಾರೆ’ ಎಂದು ಗತ್ತು ತೋರಿದ್ದಾರೆ. ಬಳಿಕ ಜೊತೆಗಿದ್ದ ಶ್ವೇತಾ, ಸೊನಾಲಿ ಬೇಂದ್ರೆ ಪೋಸ್ ಕೊಡುತ್ತಿದ್ದರೆ ಜಯಾ ದೌಲತ್ತು ತೋರಿ ಮುನ್ನಡೆದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಇಷ್ಟೊಂದು ಅಹಂಕಾರ ಒಳ್ಳೆಯದಲ್ಲ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ವಿಧಿವಶ

ಮುಂದಿನ ಸುದ್ದಿ
Show comments