Publish Date: Fri, 12 Nov 2021 (15:35 IST)
Updated Date: Fri, 12 Nov 2021 (15:38 IST)
ಟೊಕಿಯೋ ಒಲಿಂಪಿಕ್ಸ್ನಲ್ಲಿ ಸ್ವರ್ಣ ಬೇಟೆಯಾಡಿದ ಚಿನ್ನದ ಹುಡುಗ ನೀರಜ್ರ ಜೀವನಾಧಾರಿತ ಸಿನಿಮಾ ಮಾಡಲು ಬಾಲಿವುಡ್ ನಿರ್ದೇಶಕರು ತುದಿಗಾಲಲ್ಲಿ ನಿಂತಿದ್ದಾರೆ.
ನೀರಜ್ ಬಯೋಪಿಕ್ ಬರೋದು ಬಹುತೇಕ ಖಚಿತ ಅಂತ ವದಂತಿ ಹಬ್ಬಿದೆ. ಈ ಬಗ್ಗೆ ಸ್ವತಃ ನೀರಜ್ ಚೋಪ್ರಾ ಮೌನ ಮುರಿದಿದ್ದು, ನನ್ನ ಜೀವನದ ಕುರಿತು ಸಿನಿಮಾ ತಯಾರಿಸುವ ಬಗ್ಗೆ ಹಲವು ನಿರ್ದೇಶಕರು ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದ್ರೆ ನಾನು ಇನ್ನೂ ಸಾಧನೆ ಮಾಡ್ಬೇಕಿದೆ. ಮತ್ತಷ್ಟು ಪದಕಗಳನ್ನ ಗೆಲ್ಲಬೇಕಿದೆ. ಒಂದು ವೇಳೆ ಈಗ್ಲೇ ಬಯೋಪಿಕ್ ಮಾಡಿದ್ರೆ ಸಿನಿಮಾ ಫ್ಲಾಪ್ ಕೂಡ ಆಗ್ಬೋದು. ಆ ರೀತಿ ಆಗೋದು ಬೇಡ. ನಾನು ಮತ್ತಷ್ಟು ಪದಕ ಗೆದ್ರೆ, ಸಿನಿಮಾ ಕೂಡ ಹಿಟ್ ಆಗುತ್ತೆ. ಸದ್ಯಕ್ಕೆ ನನ್ನ ಜೀವನಾಧಾರಿತ ಚಿತ್ರ ತೆಗೆಯಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.