Publish Date: Sat, 09 Jun 2018 (05:55 IST)
Updated Date: Sat, 09 Jun 2018 (05:57 IST)
ಮುಂಬೈ : ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನ ಸ್ಟಾರ್ ನಟ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅವರು ಮಾತ್ರ ತಾವು ಸೂಪರ್ ಸ್ಟಾರ್ ರಜನೀಕಾಂತ್ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.
ರಜನಿಕಾಂತ್ ಅವರ ಕಾಲಾ ಸಿನಿಮಾ ಗುರುವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಈ ಬಗ್ಗೆ ಟ್ವೀಟರ್ ನಲ್ಲಿತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಟ ಅಮೀರ್ ಖಾನ್ ಅವರು ,’ನಾನು ಯಾವಾಗಲೂ ರಜನಿಯ ದೊಡ್ಡ ಫ್ಯಾನ್, ಹೀಗಾಗಿ ಅವರ ಕಾಲಾ ಸಿನಿಮಾವನ್ನು ನೋಡಲು ಇನ್ನೂ ತಡ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಸಿನಿಮಾ ಬಿಡುಗಡೆಗೂ ಮುನ್ನವೇ ಕಾಲಾ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ಅಮೀರ್ ಖಾನ್ , ದ ಕಿಂಗ್ ಅರೈವ್ಸ್ ವೈಟಿಂಗ್ ತಲೈವಾ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ