Select Your Language

Notifications

webdunia
webdunia
webdunia
webdunia

ಸನ್ನಿಲಿಯೋನಾ ಭೇಟಿ ಮಾಡಬೇಕೆಂದುಕೊಂಡವರಿಗೆ ಇಲ್ಲಿದೆ ನೋಡಿ ಒಂದು ಬಂಪರ್ ಆಫರ್

ಸನ್ನಿಲಿಯೋನಾ ಭೇಟಿ ಮಾಡಬೇಕೆಂದುಕೊಂಡವರಿಗೆ ಇಲ್ಲಿದೆ ನೋಡಿ ಒಂದು ಬಂಪರ್ ಆಫರ್
ಮುಂಬೈ , ಸೋಮವಾರ, 4 ಜೂನ್ 2018 (06:39 IST)
ಮುಂಬೈ : ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸಿನಿಮಾ ತಾರೆಯರನ್ನು ನೋಡಬೇಕು, ಅವರನ್ನು ಭೇಟಿ ಮಾಡಿ ಮಾತನಾಡಬೇಕು ಎಂಬ ಹಂಬಲವಿರುತ್ತದೆ. ಅಂತವರಿಗೆ ಇದೀಗ ಬಾಲಿವುಡ್ ನ ಮಾದಕ ನಟಿ ಸನ್ನಿ ಲಿಯೋನ್ ಅವರು ಬಂಫರ್ ಆಫರ್ ಒಂದನ್ನು ಕೊಟ್ಟಿದ್ದಾರೆ.


ಅದೇನೆಂದರೆ ಒಂದು ಕೋಟಿ 68 ಲಕ್ಷ ಕೊಟ್ಟರೆ ಸನ್ನಿ ಲಿಯೋನ್ ಅವರ ಜೊತೆ ಹರಟೆ ಹೊಡೆಯುತ್ತಾ 2 ಗಂಟೆಗಳ ಕಾಲ ಕಳೆಯಬಹುದು ಮಾತ್ರವಲ್ಲ ಅಮೆರಿಕಾದ ಲಾಸ್ ಏಂಜಲೀಸ್ ನಲ್ಲಿ ಊಟ ಕೂಡ ಮಾಡಬಹುದು. ಊಟ ಉಚಿತ. ಆದರೆ ಮದ್ಯಪಾನಕ್ಕೆ ಅಭಿಮಾನಿ ಬೇರೆ ಬಿಲ್ ಪೇ ಮಾಡಬೇಕಾಗುತ್ತದೆಯಂತೆ. ಹರಾಜಿನ ಮೂಲಕ ಆಯ್ಕೆಯಾಗುವ ಕೆಲವು ಅಭಿಮಾನಿಗಳಿಗೆ ಈ ಅವಕಾಶ ಸಿಗಲಿದ್ದು,  ಎರಡು ಗಂಟೆ ಮುಗಿದ ನಂತರ  ಅಲ್ಲಿಂದ ಹೊರಗೆ ನಡೆಯಬೇಕು. ಆದರೆ ಆಯ್ಕೆಯಾಗುವ ಅಭಿಮಾನಿಗಳಿಗೆ ಕೆಲವು ರೂಲ್ಸ್ ಹಾಕಿದ್ದಾರೆ.


ಸನ್ನಿ ಭೇಟಿಗೆ ಇರುವ ಷರತ್ತುಗಳು :
* 18 ವರ್ಷ ಮೇಲ್ಪಟ್ಟಿರಬೇಕು.
* ಹರಾಜಿನಲ್ಲಿ ಗೆಲ್ಲಬೇಕು.
* ಫೋಟೋ ಮತ್ತು ಆಟೋಗ್ರಾಫ್ ಪಡೆಯಬಹುದು.
* ಉಚಿತ ಊಟದ ವ್ಯವಸ್ಥೆ ಇರುತ್ತೆ.
* ಸನ್ನಿಯನ್ನ ಟಚ್ ಮಾಡುವಂತಿಲ್ಲ.


ನಟಿ ಸನ್ನಿ ಲಿಯೋನ್ ಅವರು ಸಿನಿಮಾದಲ್ಲಿ ನಟಿಸುವುದು ಮಾತ್ರವಲ್ಲ ಸಾಮಾಜಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಸನ್ನಿ ಆಗಾಗ ಚಾರಿಟಿ ಜೊತೆ ಸೇರಿ ಹಣ ಸಂಗ್ರಹಿಸಿ ಒಳ್ಳೆಯ ಕಾರ್ಯಗಳಿಗೆ ಬಳಕೆ ಮಾಡುತ್ತಾರೆ. ಹಾಗಾಗಿ ಇದೀಗ ಹರಾಜಿನಲ್ಲಿ ಸೇರುವ ಹಣವನ್ನ ಸನ್ನಿಲಿಯೋನಾ ಅವರು ಸ್ವಂತಕ್ಕೆ ಬಳಸಿಕೊಳ್ಳದೆ ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹಾಗೂ ಪೇಟಾಗೆ ನೀಡಲು ಮುಂದಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವೇಶ್ಯಾವಾಟಿಕೆ ಅಡ್ಡದಲ್ಲಿ ಸಿಕ್ಕಿಬಿದ್ದ ಈ ನಟಿ ಯಾರು ಗೊತ್ತಾ…?