Select Your Language

Notifications

webdunia
webdunia
webdunia
webdunia

ದತ್ತು ಮಗಳಿಗೆ ಅದ್ಭುತವಾದ ಉಡುಗೊರೆಯೊಂದನ್ನು ನೀಡಿದ ನಟಿ ಸನ್ನಿಲಿಯೋನ್. ಅದು ಏನು ಗೊತ್ತಾ?

ದತ್ತು ಮಗಳಿಗೆ ಅದ್ಭುತವಾದ ಉಡುಗೊರೆಯೊಂದನ್ನು ನೀಡಿದ ನಟಿ ಸನ್ನಿಲಿಯೋನ್. ಅದು ಏನು ಗೊತ್ತಾ?
ಮುಂಬೈ , ಭಾನುವಾರ, 3 ಜೂನ್ 2018 (16:15 IST)
ಮುಂಬೈ : ಬಾಲಿವುಡ್‌ ನಟಿ ಸನ್ನಿಲಿಯೋನ್ ಅವರು ನಿಶಾ ಕೌರ್‌ ಎಂಬ ಹೆಸರಿನ ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡಿರುವ ವಿಷಯ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ಹೊಸ ವಿಷಯವೆನೆಂದರೆ  ನಟಿ ಸನ್ನಿಲಿಯೋನ್ ಅವರು ನಿಶಾಳಿಗೆ ಅದ್ಭುತವಾದ ಉಡುಗೊರೆಯೊಂದನ್ನು ನೀಡಿದಾರಂತೆ. ಇದು ಈಗ ಬಾರಿ ಸುದ್ದಿಯಲ್ಲಿದೆ.

ನಟಿ ಸನ್ನಿಲಿಯೋನ್ ಅವರು ತಮ್ಮ ಎರಡು ವರ್ಷದ ದತ್ತು ಮಗಳು ನಿಶಾ ಬಗ್ಗೆ ತುಂಬಾ ಕೇರ್ ಮಾಡುತ್ತಾರೆ. ಮಾತ್ರವಲ್ಲ ತಮ್ಮ ಬ್ಯೂಸಿ ಶೆಡ್ಯೂಲ್ ನಲ್ಲೂ ಕೂಡ ಮಗಳಿಗಾಗಿ ಸಾಕಷ್ಟು ಸಮಯವನ್ನು  ಮೀಸಲಿಟ್ಟಿರುತ್ತಾರೆ. ಈ ಸಮಯದಲ್ಲಿ ಇದೀಗ ಅವರು ತಾವೇ ಬಿಡಿಸಿರುವ ಸುಂದರವಾದ ಪೇಂಟಿಂಗ್‌ವೊಂದನ್ನು ಮಗಳಿಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಈ ಪೇಂಟಿಂಗ್ ನಲ್ಲಿ ಕೊಂಬೆಯ ಮೇಲೆ ಕುಳಿತಿರುವ ಪಕ್ಷಿಗಳ ಹಿಂಡನ್ನು ಕುಂಚದಲ್ಲಿ ಸೆರೆ ಹಿಡಿದಿದ್ದು, ಈ ಅದ್ಭುತ ಚಿತ್ರವನ್ನು ಪೂರ್ಣಗೊಳಿಸಲು ಅವರು ಏಳು ತಿಂಗಳು ತೆಗೆದುಕೊಂಡಿದ್ದಾರಂತೆ. ಅಮ್ಮನ ಪ್ರೀತಿಯ ಉಡುಗೊರೆ ನೋಡಿ ನಿಶಾಳ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಸನ್ನಿ ಲಿಯೋನ್ ಅವರು ಇನ್ಸ್ಟಾಗ್ರಾಂನಲ್ಲಿ ಹೇಳಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ವಿವಾದವೊಂದನ್ನು ಮೈಮೆಲೆ ಎಳೆದುಕೊಂಡ ಉತ್ತರ ಪ್ರದೇಶದ ನಟ ರಾಜಾ ಚೌಧರಿ