Select Your Language

Notifications

webdunia
webdunia
webdunia
webdunia

ನಟ ಶಾರುಖ್ ಖಾನ್ ನಿವಾಸದ ಬಳಿ ಭಾರೀ ಅಗ್ನಿ ಅವಘಡ

ಶಾರುಖ್ ಖಾನ್
ಮುಂಬೈ , ಸೋಮವಾರ, 9 ಮೇ 2022 (22:45 IST)
ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಬಂಗಲೆ ಸಮೀಪದ ಕಟ್ಟಡವೊಂದರಲ್ಲಿ ಭಾರೀ ಅಗ್ನಿ ಅನಾಹುತ ಸಂಭವಿಸಿದೆ.

ಬಾಂದ್ರಾದ ಶಾರುಖ್ ನಿವಾಸ ಮನ್ನತ್ ಸಮೀಪದಲ್ಲೇ ಇರುವ ಬೃಹತ್ ಕಟ್ಟಡದ 14 ನೇ ಮಹಡಿಯಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

ಇದುವರೆಗೆ ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ. 21 ಮಹಡಿಗಳ ಬೃಹತ್ ಕಟ್ಟಡ ಇದಾಗಿದ್ದು, ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಳಿಕೆಯಲ್ಲಿ ಆರ್ ಆರ್ ಆರ್ ಸಿನಿಮಾ ಮೀರಿಸಿದ ಕೆಜಿಎಫ್ 2