ದಕ್ಷಿಣ ಭಾರತದ ಚಲನಚಿತ್ರಗಳಲ್ಲಿನ ಪ್ರಭಾವಶಾಲಿ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ 'ಪುಪ್ಪ' ಸಿನಿಮಾ ಖ್ಯಾತಿಯ ಫಹಾದ್ ಫಾಸಿಲ್ ಅವರು ಇದೀಗ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಇವರು ಇಮ್ತಿಯಾಜ್ ಅಲಿ ಅವರು ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಹೊಸ ಅಧ್ಯಾಯ ಶುರುಮಾಡಲಿದ್ದಾರೆ. ಈ ಚಿತ್ರದಲ್ಲಿ ಫಹಾದ್‌ಗೆ ಜೋಡಿಯಾಗಿ ಟ್ರಿಪ್ಟಿ ಡಿಮ್ರಿ ಅವರು ಅಭಿನಯಿಸಲಿದ್ದಾರೆ. ಈ ಸಿನಿಮಾ 2025ರಲ್ಲಿ ಸೆಟ್ ಏರಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಫಹಾದ ಅವರು ತಮ್ಮ ನೆಚ್ಚಿನ ಬಾಲಿವುಡ್ ನಿರ್ದೇಶಕರಲ್ಲಿ ಒಬ್ಬರಾದ ಇಮ್ತಿಯಾಜ್ ಅಲಿ ಅವರೊಂದಿಗೆ ಹಿಂದಿ ಚಿತ್ರರಂಗದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಲು ಉತ್ಸುಕರಾಗಿದ್ದಾರೆ.
ಅವರು ತಿಂಗಳಿನಿಂದ ಈ ಯೋಜನೆಯನ್ನು ಚರ್ಚಿಸುತ್ತಿದ್ದಾರೆ ಮತ್ತು ಅದನ್ನು ಇತ್ತೀಚೆಗೆ ಒಪ್ಪಂದದ ಪ್ರಕಾರ ಅಂತಿಮಗೊಳಿಸಲಾಗಿದೆ ಎಂದು ಮೂಲವು ಸೇರಿಸಿದೆ.
ಸದ್ಯ ಚಿತ್ರದ ಸ್ಕ್ರಿಪ್ಟ್ ಅಂತಿಮ ಹಂತಕ್ಕೆ ಬಂದು ತಲುಪಿದೆ.