ಮುಂಬೈ: ಭಾರತ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ ಅವರು ಒಂದು ಹಾಡಿಗೆ 13 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬುದು ಈಗ ಬಯಲಾಗಿದೆ. ಹಾಗಿದ್ದರೆ ಉಳಿದ ಗಾಯಕರ ಸಂಭಾವನೆ ಎಷ್ಟು ಇಲ್ಲಿದೆ ವಿವರ.
ರೋಜಾ, ಬಾಂಬೆ ಸೇರಿದಂತೆ ವಿಶಿಷ್ಟ ಮೆಲೊಡಿ ಹಾಡುಗಳ ಮೂಲಕ ಸಂಗೀತ ಮಾಂತ್ರಿಕ ಎನಿಸಿಕೊಂಡಿರುವ ಎಆರ್ ರೆಹಮಾನ್ ಭಾರತ ಬಹುಬೇಡಿಕೆಯ ಸಂಗೀತ ನಿರ್ದೇಶಕ, ಗಾಯಕ. ಅವರು ಒಂದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಲು ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ.
ಯಾವುದೇ ಸ್ಟಾರ್ ನಟರಿಗೂ ಕಮ್ಮಿಯಿಲ್ಲದಷ್ಟು ಸಂಭಾವನೆ ಪಡೆಯುತ್ತಾರೆ. ಅವರು ಒಂದು ಹಾಡು ಹಾಡಲು ತೆಗೆದುಕೊಳ್ಳುವ ಸಂಭಾವನೆ ಬರೋಬ್ಬರಿ 13 ಕೋಟಿ ಎಂದು ವರದಿಯಾಗಿದೆ. ಇದು ಈಗ ಚಾಲ್ತಿಯಲ್ಲಿರುವ ಇತರೆ ಗಾಯಕರು ಪಡೆದುಕೊಳ್ಳುವ ಸಂಭಾವನೆಯ 10 ಪಟ್ಟು ಹೆಚ್ಚು ಎನ್ನಲಾಗಿದೆ.
ಹಿಂದಿ, ದಕ್ಷಿಣ ಭಾರತದ ಭಾಷೆಗಳು ಸೇರಿದಂತೆ ಎಲ್ಲಾ ಭಾಷೆಗಳಲ್ಲಿ ತನ್ನ ಸುಮಧುರ ಕಂಠದಿಂದಲೇ ಗಮನ ಸೆಳೆವ ಗಾಯಕಿ ಶ್ರೇಯಾ ಘೋಷಾಲ್ ಒಂದು ಹಾಡಿಗೆ 25 ಲಕ್ಷ ರೂ.ವರೆಗೆ ಸಂಭಾವನೆ ಪಡೆಯುತ್ತಾರಂತೆ. ಸುನಿಧಿ ಚೌಹಾಣ್ ಸೇರಿದಂತೆ ಈಗಿನ ಬಹತೇಕ ಗಾಯಕರು ಒಂದು ಹಾಡಿಗೆ 18-20 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ. ಆದರೆ ಎಲ್ಲರಿಗೆ ಹೋಲಿಸಿದರೆ ರೆಹಮಾನ್ ದುಬಾರಿ ಗಾಯಕ ಎಂದು ವರದಿಯೊಂದು ಹೇಳಿದೆ.