Select Your Language

Notifications

webdunia
webdunia
webdunia
webdunia

ಪದ್ಮಾವತ್ ಶೂಟಿಂಗ್ ಸಮಯದಲ್ಲಿ ಶಾಹಿದ್ ಕಪೂರ್ ನ್ನು ಪತ್ನಿ ಮೀರಾ ಮನೆಯಿಂದ ಹೊರ ಹಾಕಿದ್ದರಂತೆ!

ಪದ್ಮಾವತ್ ಶೂಟಿಂಗ್ ಸಮಯದಲ್ಲಿ ಶಾಹಿದ್ ಕಪೂರ್ ನ್ನು ಪತ್ನಿ ಮೀರಾ ಮನೆಯಿಂದ ಹೊರ ಹಾಕಿದ್ದರಂತೆ!
ಮುಂಬೈ , ಶುಕ್ರವಾರ, 23 ಮಾರ್ಚ್ 2018 (07:18 IST)
ಮುಂಬೈ : ಪದ್ಮಾವತ್ ಚಿತ್ರದ ಶೂಟಿಂಗ್ ಸಮಯದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್ ಅವರನ್ನು ಅವರ  ಪತ್ನಿ ಮೀರಾ ಅವರು ಮನೆಯಿಂದ ಹೊರಹಾಕಿರುವುದಾಗಿ ಕಾರ್ಯಕ್ರಮಯೊಂದರಲ್ಲಿ ತಿಳಿಸಿದ್ದಾರೆ.


ನೇಹಾ ದುಪಿಯಾ ಅವರು ನಡೆಸಿಕೊಡುವ ಬಿಎಫ್‍ಎಫ್ ಕಾರ್ಯಕ್ರಮದಲ್ಲಿ ನಟ ಶಾಹಿದ್ ಕಪೂರ್ ಹಾಗೂ ಅವರ ಪತ್ನಿ ಮೀರಾ ಅವರು ಭಾಗವಹಿಸಿದ್ದು, ಆ ಸಂದರ್ಭದಲ್ಲಿ ಮೀರಾ ಅವರು ತಮ್ಮ ಪತಿಯ ಬಗ್ಗೆ ಹೇಳುವಾಗ ಈ ವಿಷಯ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು,’ ಶಾಹಿದ್ ಪದ್ಮಾವತ್ ಚಿತ್ರದ ಶೂಟಿಂಗ್ ಮುಗಿಸಿ ಬಂದಿದ್ದಾಗ ಅವರನ್ನು ಮನೆಯಿಂದ ಹೊರಹಾಕಿದ್ದೆ. ಅವರು ಬೆಳಗ್ಗೆ 8 ಗಂಟೆಗೆ ಶೂಟಿಂಗ್ ಮುಗಿಸಿಕೊಂಡು ಬಂದು ಮಧ್ಯಾಹ್ನ 2 ಗಂಟೆಗೆ ಏಳುತ್ತಿದ್ದರು.


ಇಡೀ ರಾತ್ರಿ ಸಿನಿಮಾ ಶೂಟಿಂಗ್‍ನಲ್ಲಿ ತೊಡಗಿ ಮನೆಗೆ ಬಂದು ಮಲಗುವ ಸಮಯದಲ್ಲಿ ಅವರಿಗೆ ಯಾವುದೇ ರೀತಿ ತೊಂದರೆ ಆಗಬಾರದೆಂಬುದು ನನಗೆ ತಿಳಿದಿತ್ತು. ಆದರೆ ಅದೇ ಸಮಯದಲ್ಲಿ ನನ್ನ ಮಗಳು ಮಿಷಾ ಕೂಡ ಆಟವಾಡುತ್ತಿದ್ದಳು. ಮಿಷಾಳ ಗಲಾಟೆ ಕೇಳಿ ಶಾಹಿದ್ ಈ ಬಗ್ಗೆ ಎನ್ನನ್ನೂ ಮಾತನಾಡಲಿಲ್ಲ. ಆದರೆ ಅವರಿಗೆ ಡಿಸ್ಟರ್ಬ್ ಆಗುತ್ತಿತ್ತು ಎಂಬುದು ನನಗೆ ತಿಳಿಯಿತು. ಇದೇ ವೇಳೆ ನಾನು ಮಿಷಾಗೆ ಸುಮ್ಮನಿರಲು ಹೇಳಲು ಸಾಧ್ಯವಿಲ್ಲ. ಇದರಿಂದಾಗಿ ನಾನು ಶಾಹಿದ್‍ರನ್ನು ಮನೆಯಿಂದ ಹೊರಗೆ ಕಳುಹಿಸಿ ಹೊಟೇಲ್‍ನಲ್ಲಿ ತಂಗಲು ಹೇಳಿದ್ದೆ ‘ಎಂದು ಹೇಳಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಬಾಘಿ-2' ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಡ್ಯಾನ್ಸ್ ಮಾಡಿದ ಹಾಡಿನ ಬಗ್ಗೆ ಮಾಧುರಿ ದೀಕ್ಷಿತ್ ಅಭಿಮಾನಿಗಳಿಗೇಕೆ ಬೇಸರ