Select Your Language

Notifications

webdunia
webdunia
webdunia
webdunia

ಹೃದಯಾಘಾತದಿಂದ ಮೃತಪಟ್ಟ ಬಾಲಿವುಡ್ ನ ಹಿರಿಯ ನಟ ನರೇಂದ್ರ ಝಾ

ಹೃದಯಾಘಾತದಿಂದ ಮೃತಪಟ್ಟ ಬಾಲಿವುಡ್ ನ ಹಿರಿಯ ನಟ ನರೇಂದ್ರ ಝಾ
ಮುಂಬೈ , ಗುರುವಾರ, 15 ಮಾರ್ಚ್ 2018 (07:08 IST)
ಮುಂಬೈ : ಬಾಲಿವುಡ್ ನಟಿ ಶ್ರೀದೇವಿ ಅವರ ಸಾವಿನ ದುಖಃ ಇನ್ನು ಮಾಸಿಲ್ಲ ಈ ನಡುವೆ  ಬಾಲಿವುಡ್ ನ  ಇನ್ನೊಬ್ಬ ಹಿರಿಯ ನಟ ನರೇಂದ್ರ ಝಾ ಅವರು ಹೃದಯಾಘಾತದಿಂದ ಬುಧವಾರ ಸಾವನಪ್ಪಿದ್ದಾರೆ.


55 ವರ್ಷ ವಯಸ್ಸಿನ ನರೇಂದ್ರ ಝಾ ಅವರು ಬುಧವಾರ ಬೆಳಿಗ್ಗೆ ವಾಡಾದಲ್ಲಿ ಇರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದು, ಇವರಿಗೆ ಈ ಹಿಂದೆ ಎರಡು ಬಾರಿ ಹೃದಯಾಘಾತ ಸಂಭವಿಸಿದ್ದು ಸರಿಯಾದ ಚಿಕಿತ್ಸೆನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ನಿನ್ನೆ ಇನ್ನೊಮ್ಮೆ ಹೃದಯಾಘಾತವಾದ ಕಾರಣ ನರೇಂದ್ರ ಝಾ ಅವರು ಕೊನೆಯುಸಿರೆಳೆದಿದ್ದಾರೆ.


ಇವರು ಹೃತಿಕ್ ರೋಷನ್ ಅವರು ನಟಿಸಿದ 'ಕಾಬಿಲ್' ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಶಾರುಖ್ ಖಾನ್ ಅವರ 'ರಾಯಿಸ್' ಹಾಗೂ ಶಾಹಿದ್ ಕಪೂರ್ ಅವರ 'ಹೈದರ್' ಚಿತ್ರದಲ್ಲಿನಟಿಸಿರುವ  ನರೇಂದ್ರ ಝಾ ಹಿರಿತೆರೆಯ ಜೊತೆಗೆ ಕಿರುತೆರೆಯಲ್ಲಿಯೂ ಅವರು ಹೆಸರು ಮಾಡಿದ್ದರು. ಇವರ ನಿಧನಕ್ಕೆ ಬಾಲಿವುಡ್ ಚಿತ್ರತಂಡ ಸಂತಾಪ ಸೂಚಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹುಟ್ಟುಹಬ್ಬ ದಿನದಂದು ಇನ್ ಸ್ಟಾಗ್ರಾಮ್‍ಗೆ ಎಂಟ್ರಿಕೊಟ್ಟಿದ್ದ ಅಮೀರ್ ಖಾನ್ ಅವರಿಗೆ ಅಭಿಮಾನಿಗಳಿಂದ ದೊರೆತ ಉಡುಗೊರೆ ಏನು ಗೊತ್ತಾ?