Select Your Language

Notifications

webdunia
webdunia
webdunia
webdunia

ನಟಿ ದೀಪಿಕಾ ಪಡುಕೋಣೆ ಯಾವಾಗ ಮದುವೆಯಾಗುತ್ತಾರಂತೆ ಗೊತ್ತಾ..?

ನಟಿ ದೀಪಿಕಾ ಪಡುಕೋಣೆ ಯಾವಾಗ ಮದುವೆಯಾಗುತ್ತಾರಂತೆ ಗೊತ್ತಾ..?
ಮುಂಬೈ , ಶನಿವಾರ, 7 ಏಪ್ರಿಲ್ 2018 (09:47 IST)
ಮುಂಬೈ : ಬಾಲಿವುಡ್  ಕ್ಯೂಟ್ ಕಪಲ್ ದೀಪಿಕಾ- ರಣವೀರ್ ಅವರು ಸದ್ಯದಲ್ಲೆ ಮದುವೆಯ ಸಿಹಿಸುದ್ದಿ ನೀಡುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೀಗ ನಟಿ ದೀಪಿಕಾ ಅವರು ಶಾಕಿಂಗ್ ನ್ಯೂಸ್ ಒಂದನ್ನು ನೀಡಿದ್ದಾರೆ.


ಅದೇನೆಂದರೆ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ ಅವರು ಸದ್ಯಕ್ಕೆ ಮದುವೆಯಾಗುತ್ತಿಲ್ಲವಂತೆ. ಈ ಬಗ್ಗೆ ಇತ್ತೀಚೆಗೆ ಏರ್ಪಡಿಸಲಾಗಿದ್ದ 'ಪದ್ಮಾವತ್' ಸಕ್ಸಸ್ ಮೀಟಿಂಗ್‌‌ನಲ್ಲಿ  ಸ್ವತಃ ದೀಪಿಕಾ ಅವರೇ ಈ ರೀತಿಯಾಗಿ ಹೇಳಿದ್ದಾರಂತೆ. ಅಂದು ಮಾಧ್ಯಮದವರು ಅವರ ಮದುವೆ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಮಾತಾಡಿದ ದೀಪಿಕಾ ಅವರು,’ ಮದುವೆ ಎಂಬುದು ಬಹಳ ಮುಖ್ಯವಾದ ವಿಷಯ. ಎಲ್ಲಾ ಹುಡುಗಿಯರಿಗೂ ಅದೊಂದು ಕನಸು. ಆತುರವಾಗಿ ಆಗುವಂತದ್ದಲ್ಲ. ನಾನೂ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೇನೆ. ಆ ಸಮಯ ಯಾವಾಗ ಬರುತ್ತದೆ ಎಂಬುದು ನನಗೆ ಚೆನ್ನಾಗಿ ಗೊತ್ತು. ಮದುವೆಯಾಗಬೇಕು ಎಂದು ನನ್ನ ಮನಸ್ಸಿಗೆ ಎನಿಸಿದಾಗ ಖಂಡಿತ ಆಗುತ್ತೇನೆ ಎಂದು ಹೇಳಿದ್ದಾರಂತೆ. ಇನ್ನೇನು ಮದುವೆ ಆಗಿ ಹೋಯಿತು ಎನ್ನುವಾಗ ದೀಪಿಕಾ ಅವರು ಹೀಗೆ ಹೇಳಿರುವುದು ಅವರ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಅನುಷ್ಕಾ ರಲ್ಲಿ ದಿಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದು ಯಾಕೆ..?