Select Your Language

Notifications

webdunia
webdunia
webdunia
webdunia

ನಟಿ ಅನುಷ್ಕಾ ರಲ್ಲಿ ದಿಲ್ಲಿ ಪೊಲೀಸರು ಮನವಿ ಮಾಡಿಕೊಂಡಿದ್ದು ಯಾಕೆ..?

ನವದಿಲ್ಲಿ
ನವದೆಹಲಿ , ಶನಿವಾರ, 7 ಏಪ್ರಿಲ್ 2018 (09:41 IST)
ನವದೆಹಲಿ: ದಿಲ್ಲಿಯಲ್ಲಿ ರಸ್ತೆ ಅಪಘಾತದ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸಂಚಾರಿ ನಿಯಮಗಳ ಬಗ್ಗೆ ವಾಹನ ಸವಾರರಿಗೆ ಅರಿವು ಮೂಡಿಸುವುದಕ್ಕಾಗಿ ಇದೀಗ ದಿಲ್ಲಿ ಪೊಲೀಸರು ‘ಸೂಯಿ ಧಾಗಾ – ಮೇಡ್ ಇನ್ ಇಂಡಿಯಾ’ ಚಿತ್ರದಲ್ಲಿ ಜೊತೆಯಾಗಿ ನಟಿಸುತ್ತಿರುವ ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಅವರಲ್ಲಿ ವಿನಂತಿಸಿಕೊಂಡಿದ್ದಾರೆ.


ವರುಣ್ ಧವನ್ ಹಾಗೂ ಅನುಷ್ಕಾ ಶರ್ಮಾ ಅವರು ನಟಿಸುತ್ತಿರುವ ‘ಸೂಯಿ ಧಾಗಾ – ಮೇಡ್ ಇನ್ ಇಂಡಿಯಾ’ ಚಿತ್ರದ ಶೂಟಿಂಗ್ ದಿಲ್ಲಿಯ ಚಾಂದಿನಿ ಚೌಕ್, ಶಂಕರ್ ಮಾರ್ಕೆಟ್ ಪ್ರದೇಶದಲ್ಲಿ ನಡೆಯುತ್ತಿದ್ದು, ಇದನ್ನು ಅರಿತ ದಿಲ್ಲಿ ಪೊಲೀಸರು ಅವರ ಜೊತೆ ಟ್ರಾಫಿಕ್ ನಿಯಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಂತೆ ದಿಲ್ಲಿಯಲ್ಲಿ ಒಂದು ವಿಶೇಷ ಕಾರ್ಯಕ್ರಮ  ನಡೆಸಬೇಕು ಎಂದುಕೊಂಡಿದ್ದಾರೆ. ಆದರೆ ಅವರು ಬಿಝಿಯಾಗಿದ್ದ ಕಾರಣ ವೀಡಿಯೋ ಒಂದನ್ನು ಚಿತ್ರೀಕರಿಸಿಕೊಂಡು ಅದನ್ನು ದಿಲ್ಲಿ ಪೊಲೀಸ್ ತನ್ನ ಅಧಿಕೃತ ಟ್ವಿಟರ್ ಮೂಲಕ ಬಿಡುಗಡೆ ಮಾಡಿದೆ.


ಆ ವೀಡಿಯೋದಲ್ಲಿ ಅನುಷ್ಕಾ ಮಾತನಾಡುತ್ತಾ, 'ನಮ್ಮ ಸುರಕ್ಷತೆಗಾಗಿ ದಿಲ್ಲಿ ಪೊಲೀಸರು ತುಂಬಾ ಕಷ್ಟಪಡುತ್ತಿದ್ದಾರೆ. ಜೀವನ ತುಂಬಾ ಮೌಲ್ಯಯುತವಾದದ್ದು. ದ್ವಿಚಕ್ರವಾಹನ ಸವಾರಿ ಮಾಡುವಾಗ ಎಚ್ಚರದಿಂದ ಇರಬೇಕು. ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.' ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ವಿಚಾರಣೆ ; ನಾಳೆಗೆ ತೀರ್ಪು ಕಾದಿರಿಸಿದ ಜೋಧಪುರದ ಸೆಷನ್ಸ್ ಕೋರ್ಟ್