ಮುಂಬೈ : ಬಾಲಿವುಡ್ ಖ್ಯಾತ ನಟಿ ಶ್ರೀದೇವಿ ಅವರು ಇತ್ತೀಚೆಗಷ್ಟೇ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಅವರ ಕುಟುಂಬ ಮಾತ್ರವಲ್ಲ ಇಡೀ ಚಿತ್ರರಂಗ ಹಾಗೂ ಅಭಿಮಾನಿ ಬಳಗವೇ ಶೋಕಸಾಗರದಲ್ಲಿ ಮುಳುಗಿತ್ತು. ಅಂತಹ ತನ್ನ ತಾಯಿಯನ್ನು ಕಳೆದುಕೊಂಡ ನಟಿ ಜಾಹ್ನವಿ ಕಪೂರ್ ದುಃಖಿಸುತ್ತಿರುವಾಗ ಅವರಿಗೆ ತನ್ನನ್ನು ತಾನು ಸಂಭಾಳಿಸಿಕೊಳ್ಳಲು ನೆರವಾಗಿದ್ದು ಧಡಕ್ ಚಿತ್ರವಂತೆ.
ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ತಾಯಿ ಸಾವಿನ ನಂತರ ನನ್ನನ್ನು ನಾನು ಸಂಭಾಳಿಸಿಕೊಳ್ಳಲು ತುಂಬಾ ಪ್ರಯತ್ನಿಸಿದ್ದೆ. ಆಗ ನನಗೆ ನೆರವಾಗಿದ್ದು ಧಡಕ್ ಚಿತ್ರ. ಅಮ್ಮ ಸತ್ತಿದ್ದಾರೆಂಬುದನ್ನು ನಾನು ಈಗಲೂ ನಂಬುವುದಿಲ್ಲ. ಅಮ್ಮಿನಿಲ್ಲದ ಜೀವನ ತುಂಬಾ ಕಷ್ಟ. ಅವರ ಅಂತ್ಯಸಂಸ್ಕಾರದ ಮರುದಿನವೇ ನಾನು ಧಡಕ್ ಚಿತ್ರೀಕರಣ ಮಾಡಬೇಕೆಂದು ನಿರ್ಧರಿಸಿದ್ದೆ ಆದರೆ ಚಿತ್ರೀಕರಣ ರದ್ದಾಗಿತ್ತು ಎಂದು ಜಾಹ್ನವಿ ಕಪೂರ್ ಹೇಳಿದ್ದಾರೆ.
ಹಾಗೇ ಧಡಕ್ ಚಿತ್ರೀಕರಣದ ಸೆಟ್ ನಲ್ಲಿರುವುದು ನನ್ನ ಉದ್ದೇಶವಾಗಿತ್ತು. ಧಡಕ್ ಚಿತ್ರದ ಶೂಟಿಂಗ್ ಇಲ್ಲದಿದ್ದರೆ ನನ್ನ ನಿಯಂತ್ರಣ ತಪ್ಪುತಿತ್ತು ಧಡಕ್ ಚಿತ್ರ ಹಾಗೂ ಕ್ಯಾಮರಾ ಮುಂದೆ ನನ್ನ ನಟನೆ ಇಲ್ಲವೆಂದಾದರೆ ನನ್ನ ಜೀವನಕ್ಕೆ ಯಾವುದೇ ಅರ್ಥವಿಲ್ಲವೆಂದು ಜಾಹ್ನವಿ ಹೇಳಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ